ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ಆಟಗಾರ ಇಂಗ್ಲೆಂಡ್ ವಿರುದ್ಧ ಗಳಿಸಿದ ರನ್‍ಗಿಂತ ಭಾರತದಲ್ಲಿ ಪೆಟ್ರೋಲ್ ದರವೇ ದುಬಾರಿ ಎನ್ನುವ ಮೂಲಕ ಮಾಜಿ ಸಂಸದೆ ರಮ್ಯಾ ಟ್ವಿಟ್ಟರ್ ನಲ್ಲಿ ಕೇಂದ್ರ ಸರ್ಕಾರದ ಕಾಲೆಳೆದಿದ್ದಾರೆ.
ರಮ್ಯಾರವರು ತಮ್ಮ ಟ್ವಿಟ್ಟರ್ ಮೂಲಕ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಪರ ವೈಯಕ್ತಿಕವಾಗಿ ರವೀಂದ್ರ ಜಡೇಜಾರವರು 86 ರನ್ ಗಳಿಸಿದ್ದಾರೆ. ಆದರೆ ಅವರು ಗಳಿಸಿದ್ದು ಭಾರತದಲ್ಲಿ 2ನೇ ಅತ್ಯಧಿಕ ರನ್ ಆಗಿದೆ. ಮೊದಲನೇಯ ಅತ್ಯಧಿಕ ರನ್ ಭಾರತದ ಪೆಟ್ರೋಲ್ ದರವೇ 87 ಆಗಿದೆ ಎಂದು ಬರೆದುಕೊಂಡಿದ್ದರು.
Ravindra Jadeja at 86 was India's second highest scorer. The highest remains petrol at 87. #EngvInd #MehangiPadiModiSarkar
— Ramya/Divya Spandana (@divyaspandana) September 10, 2018
ಭಾನುವಾರ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲನೇ ಇನ್ನಿಂಗ್ಸ್ ಕ್ರಿಕೆಟ್ ಪಂದ್ಯದಲ್ಲಿ ಭಾರತದ ಪರ ರವೀಂದ್ರ ಜಡೇಜಾರವರು 86 ರನ್ ಗಳಿಸುವ ಮೂಲಕ ಭಾರತ ಪರ ವೈಯಕ್ತಿಕವಾಗಿ ಅತಿ ಹೆಚ್ಚು ರನ್‍ಗಳಿಸಿದ್ದರು. ರವೀಂದ್ರ ಜಡೇಜಾ ಅಜೇಯಾ 86 ರನ್ (156 ಎಸೆತ, 11 ಬೌಂಡರಿ, 1 ಸಿಕ್ಸರ್) ನೆರವಿನ ಹೊರತಾಗಿಯೂ ಟೀಂ ಇಂಡಿಯಾ 292 ರನ್‍ಗಳಿಗೆ ಅಲೌಟ್ ಆಗಿ 40 ರನ್ ಗಳ ಅಲ್ಪ ಹಿನ್ನಡೆ ಪಡೆಯಿತು. ಈ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 10 ವಿಕೆಟ್ ನಷ್ಟಕ್ಕೆ 332 ರನ್‍ಗಳಿಸಿತ್ತು.
ದಿನದಿಂದ ದಿನಕ್ಕೆ ತೈಲ ಬೆಲೆಗಳು ಗಗನಕ್ಕೇರುತ್ತಿದ್ದರೂ, ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ, ಹೀಗಾಗಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕಾಂಗ್ರೆಸ್ ಸೋಮವಾರ ಭಾರತ್ ಬಂದ್ ಗೆ ಕರೆ ನೀಡಿತ್ತು. ಕರ್ನಾಟಕದಲ್ಲಿಯೂ ಬಂದ್‍ಗೆ ಸಂಪೂರ್ಣ ಸಹಕಾರ ದೊರೆತಿದ್ದು, ಬಹುತೇಕ ಸಾರಿಗೆ ವ್ಯವಸ್ಥೆ ಸ್ತಭ್ದವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು, ಅಂಗಡಿ-ಮುಗ್ಗಟ್ಟುಗಳು ಮುಚ್ಚಿವೆ. ಬೇರೆ ಊರಿನಿಂದ ಬಂದ ಪ್ರಯಾಣಿಕರು ತಮ್ಮ ತಮ್ಮ ಸ್ಥಳಗಳಿಗೆ ತೆರಳಲು ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ತೈಲ ಬೆಲೆ ಏರಿಕೆ ವಿರೋಧಿಸಿ ಸೋಮವಾರ ಭಾರತ್ ಬಂದ್- ಏನಿರುತ್ತೆ..? ಏನಿರಲ್ಲ..?
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv