ಢಾಕಾ: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದಾಗಿ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಹಲವೆಡೆ ಹಿಂಸಾತ್ಮಕ ರೂಪ ಪಡೆದಿದೆ.
ಈ ನಡುವೆ ತನ್ನ ದೇಶದಲ್ಲಿನ ಚೀನಿ ಕಂಪನಿಗಳು ಸ್ಥಳೀಯ ಉದ್ಯೋಗಿಗಳಿಗೆ ಕಡಿಮೆ ವೇತನ ನೀಡುತ್ತಿವೆ. ಅಲ್ಲದೇ ದೈಹಿಕವಾಗಿ ಹಲ್ಲೆ ಮಾಡುತ್ತಾ ವೃತ್ತಿಪರತೆಯಿಲ್ಲದೇ ಬಾಂಗ್ಲಾ ಪ್ರಜೆಗಳನ್ನು ಅತ್ಯಂತ ಕೆಟ್ಟದ್ದಾಗಿ ನಡೆಸಿಕೊಳ್ಳುತ್ತಿವೆ ಎಂದು ಬಾಂಗ್ಲಾದೇಶ ಕಿಡಿಕಾರಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
Advertisement
https://twitter.com/WallStreetSilv/status/1556083741830832130?ref_src=twsrc%5Etfw%7Ctwcamp%5Etweetembed%7Ctwterm%5E1556083741830832130%7Ctwgr%5E96793408a48f4261b4a288e5c0300cf20585d929%7Ctwcon%5Es1_&ref_url=https%3A%2F%2Ftv9kannada.com%2Fworld%2Fbangladesh-crisis-protest-against-petrol-diesel-price-hike-hard-clashes-have-erupted-in-several-cities-rak-au33-424598.html
Advertisement
ಚೀನಾದ ಅನುದಾನಿತ ಯೋಜನೆಗಳಲ್ಲಿ ಉದ್ಯೋಗದಲ್ಲಿರುವ ಬಾಂಗ್ಲಾದೇಶದ ಸ್ಥಳೀಯರಿಗೆ ಕೆಲಸದ ನೇಮಕಾತಿ ಪತ್ರ ನೀಡುವುದಿಲ್ಲ. ಒಂದು ತಿಂಗಳಲ್ಲಿ 26 ದಿನ ಕಡ್ಡಾಯವಾಗಿ ಕೆಲಸ ಮಾಡಲೇಬೇಕಿದೆ. ದಿನದ ಕರ್ತವ್ಯದ ಅವಧಿಗೆ ಮಿತಿಯಿಲ್ಲದಂತೆ 16-18 ಗಂಟೆಗಳ ವರೆಗೆ ಕೆಲಸ ಮಾಡುವ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಉದ್ಯೋಗಿಗಳಿಗೆ ವೇತನ ನೀಡುವುದನ್ನು ತಡಮಾಡಲಾಗುತ್ತಿದೆ. ಸ್ಥಳೀಯ ನೌಕರರನ್ನು ಪ್ರಶ್ನಿಸದಂತೆ ನಡೆಸಿಕೊಳ್ಳುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Advertisement
Advertisement
ಬೆಲೆ ಏರಿಕೆ ಖಂಡಿಸಿ ಹಲವೆಡೆ ಹಿಂಸಾಚಾರ: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜನರು ಪ್ರತಿಭಟನೆ ನಡೆಸಿದ್ದು, ಹಲವೆಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಬಾಂಗ್ಲಾದೇಶ ಶನಿವಾರದಿಂದ ಜಾರಿಗೆ ಬರುವಂತೆ ಇಂಧನ ಬೆಲೆಯನ್ನು ಶೇ.51.7 ಹೆಚ್ಚಿಸಿದ್ದು, ಈಗಾಗಲೇ ಅಧಿಕ ಹಣದುಬ್ಬರ ಎದುರಿಸುತ್ತಿರುವ ದೇಶದ ಜನರಿಗೆ ಮತ್ತಷ್ಟು ಹೊರೆಯಾಗಿದೆ.
Protests in Bangladesh have erupted. The public is enraged by soaring oil and gas prices. Take a look at the scene in Dhaka:pic.twitter.com/CVFKV7nidP
— Steve Hanke (@steve_hanke) August 6, 2022
ಹೆಚ್ಚುತ್ತಿರುವ ಇಂಧನ ಮತ್ತು ಆಹಾರದ ಬೆಲೆಗಳು ಅದರ ಆಮದು ವೆಚ್ಚ ಹೆಚ್ಚಿಸಿವೆ. ಇದು ಅಂತರರಾಷ್ಟ್ರೀಯ ಹಣಕಾಸು ನಿಧಿ ಸೇರಿದಂತೆ ಜಾಗತಿಕ ಸಾಲ ನೀಡುವ ಸಂಸ್ಥೆಗಳಿಂದ ಸಾಲವನ್ನು ಪಡೆಯಲು ಸರ್ಕಾರವನ್ನು ಪ್ರೇರೇಪಿಸಿದೆ. ಜಾಗತಿಕ ಮಾರುಕಟ್ಟೆಯ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಇಂಧನ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಸರ್ಕಾರಿ ಸ್ವಾಮ್ಯದ ಬಾಂಗ್ಲಾದೇಶ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿ) ಜುಲೈವರೆಗಿನ 6 ತಿಂಗಳಲ್ಲಿ ತೈಲ ಮಾರಾಟದಲ್ಲಿ 8 ಬಿಲಿಯನ್ ಟಾಕಾ (8.5 ಕೋಟಿ ಡಾಲರ್) ನಷ್ಟವನ್ನು ಅನುಭವಿಸಿದೆ. ಇದು ಮಧ್ಯಮ-ಆದಾಯದ ಕುಟುಂಬಗಳು ತಮ್ಮ ದೈನಂದಿನ ವೆಚ್ಚಗಳನ್ನು ಪೂರೈಸಲು ಒತ್ತಡವನ್ನು ಹೇರುತ್ತದೆ. ಇದರಿಂದ ಮುಂದೆ ಪಾಕಿಸ್ತಾನ, ಶ್ರೀಲಂಕಾಲದಲ್ಲಿ ಉಂಟಾದ ಸ್ಥಿತಿ ಬಾಂಗ್ಲಾ ದೇಶಕ್ಕೂ ಬರಬಹುದೇ ಎಂದು ಜನ ಆತಂಕಕ್ಕೀಡಾಗಿದ್ದಾರೆ.