ಬೆಂಗಳೂರು: ಆನ್ ಲೈನ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟವಾಗುತ್ತಿತ್ತು. ಕಾಲಕ್ರಮೇಣ ದಿನಬಳಕೆ ವಸ್ತುಗಳು, ದಿನಸಿ ಹೀಗೆ ನಾನಾ ಬಗೆಯ ವಸ್ತುಗಳ ಮನೆಬಾಗಿಲಿಗೆ ಡೆಲಿವರಿ ಮಾಡೋ ಕಂಪನಿಗಳು ಪ್ರಾರಂಭವಾಗಿದ್ದು ಹಳೆ ವಿಚಾರ. ಈಗ ಆನ್ ಲೈನ್ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ ಕೂಡ ಶುರುವಾಗಿದೆ.
ಹೌದು. ಇಷ್ಟು ದಿನ ಆನ್ ಲೈನ್ ನಲ್ಲಿ ತಮಗೆ ಬೇಕಾದ ವಸ್ತುಗಳನ್ನು, ದಿನಸಿಗಳನ್ನ, ಫುಡ್ ಗಳನ್ನ ಬುಕ್ ಮಾಡಿ ಮನೆ ಬಾಗಿಲಿಗೆ ತರಿಸಿಕೊಳ್ತಾ ಇದ್ವಿ. ಇದೀಗ ಪೆಟ್ರೋಲಿಯಂ ಉತ್ಪನ್ನಗಳು ಕೂಡ ಮನೆ ಬಾಗಿಲಿಗೆ ಡೆಲಿವೆರಿ ಮಾಡೋ ಕಂಪನಿಯೊಂದು ಕಳೆದ ವಾರ ಶುರುವಾಗಿದೆ.
Advertisement
Advertisement
ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿ `ಮೈ ಪೆಟ್ರೋಲ್ ಪಂಪ್’ ಅನ್ನೋ ಆನ್ ಲೈನ್ ಸಂಸ್ಥೆ ಪ್ರಾರಂಭವಾಗಿದೆ. ಇಡೀ ದೇಶದಲ್ಲೇ ಆನ್ ಲೈನ್ ಬುಕ್ಕಿಂಗ್ ಮೂಲಕ ಪೆಟ್ರೋಲಿಯಂ ಪ್ರಾಡಕ್ಟ್ ಗಳನ್ನ ಮನೆಬಾಗಿಲಿಗೆ ಒದಗಿಸೋ ಮೊದಲ ಸಂಸ್ಥೆ ಇದಾಗಿದ್ದು, ಬೆಂಗಳೂರಿನಲ್ಲಿಯೇ ಕಾರ್ಯಾರಂಭ ಮಾಡಿರೋದು ವಿಶೇಷ.
Advertisement
ಒಂದೇ ದಿನಕ್ಕೆ 5000 ಕರೆಗಳು: ಮೈ ಪೆಟ್ರೋಲ್ ಪಂಪ್ ಅನ್ನೋ ವೆಬ್ ಸೈಟ್, ಹಾಗೂ ಮೊಬೈಲ್ ಆ್ಯಪ್ ಮತ್ತು ಮೊಬೈಲ್ ಸಂಖ್ಯೆಗೆ ಮೊದಲ ದಿನವೇ 5000 ಸಾವಿರ ಕರೆಗಳು ಬಂದಿದೆ. ಹಾಗೇಯೆ 500 ಆರ್ಡರ್ ಗಳು ಬುಕ್ ಆಗಿದೆ. ಆದ್ರೆ ಈ ಹೊಸ ಪೆಟ್ರೋಲಿಯಂ ಸೇವೆಗೆ ಆರಂಭದಲ್ಲೇ ವಿಘ್ನ ಅನ್ನೋ ಹಾಗೆ ಪೆಟ್ರೋಲಿಯಂ ಸೇಫ್ಟಿ ಸಂಸ್ಥೆ, ಆನ್ ಲೈನ್ ನಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಮಾರಾಟ ಮಾಡುವ ನಿಮ್ಮ ಸೇವೆ ಉತ್ತಮವಾದುದೇ, ಆದ್ರೆ ಇದಕ್ಕೆ ಕೇಂದ್ರ ಪೆಟ್ರೋಲಿಯಂ ಇಲಾಖೆಯಿಂದ ಕೆಲವು ಗೈಡ್ ಲೈನ್ ಆಗಬೇಕು. ಅಲ್ಲಿಯವರಗೂ ಆನ್ ಲೈನ್ ನಲ್ಲಿ ಮಾರಾಟ ಮಾಡುವುದನ್ನ ನಿಲ್ಲಿಸಿ ಅಂತಾ ನೋಟಿಸ್ ನೀಡಿದ್ದಾರೆ.
Advertisement
ಒಟ್ಟಿನಲ್ಲಿ ಒಂದು ವರ್ಷದಿಂದ ಪ್ಲಾನ್ ಮಾಡಿ ಈ ಆನ್ ಲೈನ್ ಪೆಟ್ರೋಲಿಯಂ ಉತ್ಪನ್ನಗಳು ಮಾರಾಟ ಸಂಸ್ಥೆಯನ್ನ ಪ್ರಾರಂಭ ಮಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಒಂದು ಕರೆ ಮಾಡಿದ್ರೇ ಪೇಟ್ರೋಲ್ ಡೀಸೆಲ್ ನಿಮ್ಮ ಮನೆ ಬಾಗಿಲಿಗೆ ಬಂದು ತಲುಪಲಿದೆ.