ನೂತನ ವಧು-ವರರಿಗೆ ಪೆಟ್ರೋಲ್ ಗಿಫ್ಟ್ ಕೊಟ್ಟ ಸ್ನೇಹಿತರು

Public TV
1 Min Read
CKM MARRIGAE

ಚಿಕ್ಕಮಗಳೂರು: ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೇರಿರೋ ಹಿನ್ನೆಲೆ ನವ ಜೀವನಕ್ಕೆ ಕಾಲಿಟ್ಟ ನೂತನ ವಧು-ವರರಿಗೆ ಪೆಟ್ರೋಲ್ ಉಡುಗೊರೆ ನೀಡಿರೋ ಘಟನೆ ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ.

Petrol Diesel Price 1

ಮುಹೂರ್ತ ಮುಗಿದ ಬಳಿಕ ವೇದಿಕೆ ಮೇಲೆ ರಿಸೆಪ್ಷನ್‍ಗೆ ನಿಂತಿದ್ದ ದಂಪತಿಗಳು ಪೆಟ್ರೋಲ್ ಬಾಟಲಿ ನೋಡಿ ಶಾಕ್ ಆಗಿದ್ದಾರೆ. ಮದುವೆಗೆ ಬಂದಿದ್ದ ಇತರೇ ಜನಸಾಮಾನ್ಯರು ಕೂಡ ಉಡುಗೊರೆ ನೋಡಿ ನಸುನಕ್ಕಿದ್ದಾರೆ. ಮೂಡಿಗೆರೆ ಪಟ್ಟಣದ ಬಂಟರ ಭವನದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸಚಿನ್ ಮರ್ಕಲ್ ಹಾಗೂ ವೈಷ್ಣವಿ ಮದುವೆ ಸಮಾರಂಭ ಇತ್ತು. ಮದುವೆ ಸಮಾರಂಭಕ್ಕೆ ಬಂದಿದ್ದ ಸಚಿನ್ ಮತ್ತು ಅವರ ಸ್ನೇಹಿತರು ನವದಂಪತಿಗಳಿಗೆ ಒಂದು ಲೀಟರ್‍ ನ ಮೂರು ಪೆಟ್ರೋಲ್ ಬಾಟಲಿಗಳನ್ನು ನೀಡಿ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಅಯುಧಕ್ಕೆ ಪೂಜೆ ಸಲ್ಲಿಸಿ ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಶಾಸಕ

MARRIGE PETROL GIFT

ವಧು ಹಾಗೂ ವರ ಇಬ್ಬರಿಗೂ ತಲಾ ಒಂದೂವರೆ ಲೀಟರ್ ಪೆಟ್ರೋಲ್ ಬಾಟಲಿಯನ್ನು ಗಿಫ್ಟ್ ರೂಪದಲ್ಲಿ ಕೊಟ್ಟಿದ್ದಾರೆ. ಸ್ನೇಹಿತರ ಕೈಯಲ್ಲಿ ಪೆಟ್ರೋಲ್ ಬಾಟಲಿ ನೋಡಿದ ವೇದಿಕೆ ಮೇಲಿದ್ದ ನೂತನ ವಧು-ವರರು ಕೂಡ ಆಶ್ಚರ್ಯಕ್ಕೀಡಾಗಿದ್ದಾರೆ. ಮದುವೆಗೆ ಬಂದಿದ್ದ ಜನರೂ ಕೂಡ ಈ ಗಿಫ್ಟ್ ನೋಡಿ ಆಶ್ಚರ್ಯದ ಜೊತೆ ಸಂತೋಷ ವ್ಯಕ್ತಪಡಿಸಿ, ಪೆಟ್ರೋಲ್-ಡಿಸೇಲ್ ಬೆಲೆ ಗಗನ ಮುಟ್ಟಿದೆ ಸರ್ಕಾರ ಪೆಟ್ರೋಲ್-ಡಿಸೇಲ್ ಬೆಲೆಯನ್ನು ಯಾವಾಗ ಇಳಿಸುತ್ತೋ ಏನೋ ಅಂತ ಸರ್ಕಾರಕ್ಕೆ ಹಿಡಿಶಾಪ ಹಾಕ್ಕೊಂಡು, ಮದುವೆ ಮನೆಯಲ್ಲಿ ಊಟ ಮಾಡಿ, ನೂತನ ವಧು-ವರರಿಗೆ ಶುಭ ಕೋರಿದ್ದಾರೆ. ಇದನ್ನೂ ಓದಿ: ಗೊಂಬೆಗಳ ಮಧ್ಯೆ ಪುಟ್ಟ ಗೊಂಬೆಯಂತೆ ಕುಳಿತ ರಾಯನ್

Share This Article
Leave a Comment

Leave a Reply

Your email address will not be published. Required fields are marked *