ಬೆಂಗಳೂರು: ಪೆಟ್ರೋಲ್ ಡೋರ್ ಡೆಲಿವರಿ ವ್ಯವಸ್ಥೆ ಪ್ರಸ್ತಾವನೆಗೆ ಸಂಬಂಧಿಸಿದಂತೆ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಮುಖಂಡ ಪಾಟೀಲ್ ಕಿಡಿಕಾರಿದ್ದು, ಪಬ್ಲಿಕ್ ರೋಡಲ್ಲಿ ನಿಂತುಕೊಂಡು ಬಿಟ್ಟು ಅಪಾಯದ ಅರಿವಿಲ್ಲದವರು ಪ್ರಧಾನಿ ಸ್ಥಾನದಲ್ಲಿ ಕೂತಿದ್ದಾರೆ ಎಂದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ ಎಂದಿದ್ದಾರೆ.
ಇಂದು ನಡೆದ ಅಖಿಲ ಕರ್ನಾಟಕ ಫೆಡರೇಷನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಟೀಲ್, ಪೆಟ್ರೋಲ್ ಬಾಂಬ್ ಇದ್ದ ಹಾಗೆ. ಅದನ್ನು ಬಂಕ್‍ಗೆ ಲೋಡ್, ಅನ್‍ಲೋಡ್ ಮಾಡುವಾಗ ಸಾಕಷ್ಟು ರೂಲ್ಸ್‍ಗಳಿವೆ. ಸ್ವಲ್ಪ ಎಡವಟ್ಟು ಆದ್ರೆ ಬೆಂಕಿ ಹತ್ತುತ್ತೆ. ಅಂಥದ್ರಲ್ಲಿ ರಸ್ತೆಯಲ್ಲಿ, ಮನೆ ಬದಿಯಲ್ಲಿ ನಿಂತು ಪೆಟ್ರೋಲ್ ಮಾರಾಟ, ಡೋರ್ ಡೆಲಿವರಿ ಮಾಡ್ತಾರೆ ಅಂತಾ ಹೇಳುತ್ತಿದ್ದಾರೆ. ಏನಾದ್ರೂ ಅನಾಹುತ ಆದ್ರೆ ಅದಕ್ಕೆ ಯಾರು ಹೊಣೆ. ನಿಜಕ್ಕೂ ಇದು ನಾಚಿಕೆಗೇಡಿನ ನಿರ್ಧಾರ ಎಂದು ಹೇಳಿದ್ರು.
Advertisement
ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಪೆಟ್ರೋಲ್ ಬಂಕ್ ಮಾಲೀಕರ ಸಂಘದವರು ಸರ್ಕಾರದ ಮುಂದೆ ಕೆಲ ಬೇಡಿಕೆಗಳನ್ನು ಇಟ್ಟಿದ್ದು, ಅವುಗಳನ್ನು ಮೇ 9ರೊಳಗೆ ಈಡೇರಿಸಬೇಕು. ಇಲ್ಲವಾದಲ್ಲಿ ಮತ್ತೆ ಪ್ರತಿಭಟನೆಗೆ ನಡೆಸಲಾಗುವುದು ಎಂದು ಪೆಟ್ರೋಲ್ ಬಂಕ್ ಸಂಘದ ಅಧ್ಯಕ್ಷ ಬಿ. ಆರ್.ರವೀಂದ್ರನಾಥ್ ಹೇಳಿದ್ದಾರೆ.
Advertisement
ನವೆಂಬರ್ 4ರಂದು ನಡೆದ ಸಭೆಯ ತೀರ್ಮಾನದಂತೆ ಬೇಡಿಕೆ ಈಡೇರಿಸಬೇಕು. ಒಂದು ವೇಳೆ ಬೇಡಿಕೆಗಳು ಪೂರ್ಣವಾಗಲಿಲ್ಲ ಅಂದ್ರೆ ಮೇ 10ರಂದು ಯಾವುದೇ ಪೆಟ್ರೋಲ್ ಖರೀದಿಸದಿರಲು ನಿರ್ಧರಿಸಲಾಗಿದೆ. ಮೇ 15ರಿಂದ ಒಂದು ಪಾಳಿಯ ಕೆಲಸ ಮಾಡಲಾಗುವುದು. ಮೇ 14 ರಿಂದ ಪ್ರತಿ ಭಾನುವಾರ ಪೆಟ್ರೋಲ್ ಸೇವೆ ಸ್ಥಗಿತಗೊಳಿಸಲಾಗುವುದು. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ 15 ಹಾಗೂ 10 ಪೈಸೆ ಮಾಲೀಕರಿಗೆ ನೀಡಲು ಒತ್ತಾಯ ಹೇರಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
Advertisement
ಹಾಗಾದರೆ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಬೇಡಿಕೆಗಳೇನು?
ಅಪೂರ್ವ ಚಂದ್ರ ಕಮಿಟಿ ಜಾರಿ ಮಾಡಬೇಕು. ನವೆಂಬರ್ 4ರಂದು ನಡೆದ ಸಭೆಯ ತೀರ್ಮಾನದಂತೆ ಬೇಡಿಕೆ ಈಡೇರಿಸಬೇಕು. ಜನವರಿ – ಜುಲೈ ಆರು ತಿಂಗಳೊಳಗೆ ಎಲ್ಲಾ ಬಿಲ್ಲುಗಳು ಪರಿಷ್ಕರಣೆ ಆಗಬೇಕು.
Advertisement