ನವದೆಹಲಿ: 137 ದಿನಗಳ ನಂತರ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬಾರಿ ಏರಿಕೆ ಕಂಡಿದೆ. ಮಾರ್ಚ್ 22ರ ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್ ಪೆಟ್ರೋಲ್, ಡಿಸೇಲ್ ಬೆಲೆ 80 ಪೈಸೆ ಹೆಚ್ಚಳವಾಗಿದೆ.
Advertisement
ಬೆಲೆ ಏರಿಕೆಯಿಂದ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್‍ಗೆ 101.42 ಮತ್ತು ಡೀಸೆಲ್‍ಗೆ 85.80 ತಲುಪಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 96.21, ಪ್ರತಿ ಲೀಟರ್ ಡೀಸೆಲ್‍ಗೆ 87.47, ಮುಂಬೈನಲ್ಲಿ ಲೀಟರ್ ಪೆಟ್ರೋಲ್ 110.78, ಡೀಸೆಲ್ 94.94, ಕೋಲ್ಕತ್ತಾದಲ್ಲಿ ಪೆಟ್ರೋಲ್ 102.16 ಮತ್ತು ಡೀಸೆಲ್ 90.62, ಚೆನ್ನೈನಲ್ಲಿ ಪೆಟ್ರೋಲ್ ದರ 102.16, ಡೀಸೆಲ್ ದರ 92.19 ರೂಪಾಯಿಗೆ ಏರಿಕೆಯಾಗಿದೆ. ಇದನ್ನೂ ಓದಿ: ಇದೆ ಮೊದಲ ಬಾರಿ ಬಿಡಿಎ ಬ್ರೋಕರ್‌ಗಳ ಮನೆ ಮೇಲೆ ಎಸಿಬಿ ದಾಳಿ
Advertisement
Advertisement
ನವೆಂಬರ್ 2ರಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿರಲಿಲ್ಲ. ಪಂಚ ರಾಜ್ಯಗಳ ಚುನಾವಣೆ ಬಳಿಕ ದರ ಏರಿಕೆಯ ನಿರೀಕ್ಷೆ ಇತ್ತು. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು
Advertisement
ಕಳೆದ ವರ್ಷ ನವೆಂಬರ್‌ನಿಂದ ಈವರೆಗೂ ಕಚ್ಚಾ ತೈಲ ದರದಲ್ಲಿ ಶೇ. 25ರಷ್ಟು ಏರಿಕೆಯಾಗಿದೆ. ರಷ್ಯಾ, ಉಕ್ರೇನ್ ನಡುವಿನ ಸಂಘರ್ಷದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಬಾರಿ ಏರಿಕೆ ಕಂಡಿದ್ದು ಈಗ ಭಾರತದ ಮೇಲೂ ಪರಿಣಾಮ ಬಿದ್ದಿದೆ.