ನವದೆಹಲಿ: 15 ದಿನಗಳಿಗೊಮ್ಮೆ ಪರಿಷ್ಕರಣೆ ಆಗುತ್ತಿದ್ದ ಪೆಟ್ರೋಲ್, ಡೀಸೆಲ್ ದರ ಇನ್ನು ಮುಂದೆ ಪ್ರತಿದಿನ ಪರಿಷ್ಕರಣೆಯಾಗಲಿದ್ದು, ಪ್ರಾಯೋಗಿಕವಾಗಿ ಮೇ 1ರಿಂದ ದೇಶದ ಐದು ಮಹಾನಗರಗಳಲ್ಲಿ ಜಾರಿಗೆ ಬರಲಿದೆ.
ಪಾಂಡಿಚೇರಿ, ಆಂಧ್ರಪ್ರದೇಶದ ವೈಝಾಗ್, ರಾಜಸ್ಥಾನದ ಉದಯ್ ಪುರ್, ಜಾರ್ಖಂಡ್‍ನ ಜಮ್ಶೆಡ್‌ಪುರ ಚಂಡೀಗಢದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿದ್ದು, ಮುಂದಿನ ಹಂತದಲ್ಲಿ ದೇಶಾದ್ಯಂತ ಜಾರಿ ಮಾಡಲು ಭಾರತೀಯ ತೈಲ ಕಂಪೆನಿಗಳು ತೀರ್ಮಾನಿಸಿದೆ.
Advertisement
ಪ್ರಮುಖ 5 ಮಹಾನಗರಗಳಲ್ಲಿ ಈ ಯೋಜನೆಯನ್ನು ಜಾರಿಗೆ ತಂದ ಬಳಿಕ, ದೇಶದ ಉಳಿದ ಭಾಗದಲ್ಲಿ ಜಾರಿಗೊಳಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
Advertisement
ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪ್ರಸ್ತುತ ದೇಶದಲ್ಲಿ ಶೇ.95ರಷ್ಟು ಮಾರುಕಟ್ಟೆಯನ್ನು ಹೊಂದಿದ್ದು, ಈ ಎಲ್ಲ ತೈಲ ಕಂಪೆನಿಗಳ ಅಧಿಕಾರಿಗಳು ಏಪ್ರಿಲ್ 5ರಂದು ಧರ್ಮೇಂದ್ರ ಪ್ರಧಾನ್ ಜೊತೆ ಮಾತುಕತೆ ನಡೆಸಿದ್ದರು.
Advertisement
ಪ್ರತಿದಿನ ತೈಲ ಬೆಲೆಯನ್ನು ಪರಿಷ್ಕರಿಸಬೇಕು ಎನ್ನುವ ಪ್ರಸ್ತಾಪ ಈ ಹಿಂದೆಯೇ ಇತ್ತು. ಆದರೆ ಇಲ್ಲಿಯವರೆಗೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ದೇಶದಲ್ಲಿ ಸುಮಾರು 58 ಸಾವಿರ ಬಂಕ್‍ಗಳನ್ನು ಹೊಂದಿರುವ ಈ ತೈಲ ಕಂಪೆನಿಗಳು ಕಾರ್ಯರೂಪಕ್ಕೆ ತರಲು ಮುಂದಾಗಿದೆ.
Advertisement
ಗ್ರಾಹಕರಿಗೆ ಲಾಭವೇ?
ಪ್ರಸ್ತುತ ಈಗ ಪ್ರತಿ 15ದಿನಗಳಿಗೊಮ್ಮೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯನ್ನು ನೋಡಿಕೊಂಡು ಭಾರತೀಯ ತೈಲ ಕಂಪೆನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಿಸುತ್ತಿರುತ್ತವೆ. ಇದರಿಂದಾಗಿ ಕೆಲವೊಮ್ಮೆ ಭಾರೀ ಬೆಲೆ ಏರಿಕೆಯಾದರೆ, ಕೆಲವೊಮ್ಮೆ ಭಾರೀ ಇಳಿಕೆಯಾಗುತ್ತದೆ. ಏರಿಕೆಯಾದರೆ ಗ್ರಾಹಕರಿಗೆ ಹೊರೆಯಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ಪ್ರತಿ ದಿನ ದರವನ್ನು ಪರಿಷ್ಕರಿಸಿದರೆ ಪ್ರತಿದಿನ ಕೆಲ ಪೈಸೆ ಏರಿಕೆಯಾಗಬಹುದು ಇಲ್ಲವೇ ಕೆಲ ದಿನ ಕೆಲ ಪೈಸೆ ಇಳಿಕೆಯಾಗಬಹುದು. ಇದರಿಂದಾಗಿ ಗ್ರಾಹಕರಿಗೆ ಅಷ್ಟೇನು ಹೊರೆ ಬೀಳುವುದಿಲ್ಲ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಇಳಿಕೆ ಅಥವಾ ಏರಿಕೆಯಾದರೂ ವಿಶೇಷವಾಗಿ ಚುನಾವಣೆಯ ಸಂದರ್ಭದಲ್ಲಿ ಸರ್ಕಾರದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇರುವುದರಿಂದ ತೈಲ ಕಂಪೆನಿಗಳು ಈ ಅವಧಿಯಲ್ಲಿ ದರ ಪರಿಷ್ಕರಣೆಗೆ ಮುಂದಾಗುವುದಿಲ್ಲ. ಒಂದು ವೇಳೆ ಪ್ರತಿದಿನ ದರವನ್ನು ಪರಿಷ್ಕರಿಸುವ ವ್ಯವಸ್ಥೆ ಬಂದರೆ ಚುನಾವಣೆಯ ಅವಧಿಯಲ್ಲೂ ದರವನ್ನು ಏರಿಕೆ, ಇಳಿಕೆ ಮಾಡುವ ಸ್ವಾಂತಂತ್ರ್ಯ ಇವುಗಳಿಗೆ ಸಿಗಲಿದೆ.
ಸತತ ಏರಿಕೆಯಾಗುತ್ತಿದ್ದ ಪೆಟ್ರೋಲ್ ಡೀಸೆಲ್ ಬೆಲೆ ಬಹಳ ದಿನಗಳ ಬಳಿಕ ಮಾರ್ಚ್ 31ರಂದು ಭಾರೀ ಇಳಿಕೆಯಾಗಿತ್ತು. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 3.77 ರೂ. ಇಳಿಕೆಯಾಗಿದ್ದರೆ, ಡೀಸೆಲ್ ಬೆಲೆ 2.91 ರೂ. ಇಳಿಕೆಯಾಗಿತ್ತು. ಪ್ರತಿ 15 ದಿನಗಳಿಗೊಮ್ಮೆ ದರವನ್ನು ಪರಿಷ್ಕರಿಸುತ್ತಿದ್ದ ತೈಲ ಕಂಪೆನಿಗಳು ಪಂಚರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ಎರಡು ತಿಂಗಳಿನಿಂದ ಬೆಲೆ ಪರಿಷ್ಕರಣೆ ಮಾಡಿರಲಿಲ್ಲ. ಆದರೆ, ಈ ಅವಧಿಯಲ್ಲಿ ಅಡುಗೆ ಅನಿಲ ದರವನ್ನು ಮಾತ್ರ ಪರಿಷ್ಕರಿಸಲಾಗಿತ್ತು.
ಭಾರತ ಸರ್ಕಾರ 2010 ರಲ್ಲಿ ಪೆಟ್ರೋಲ್ ನಿಯಂತ್ರಣ ಮುಕ್ತಗೊಳಿಸಿದರೆ, 2014ರಲ್ಲಿ ಡೀಸೆಲ್ ಅನ್ನು ತನ್ನ ನಿಯಂತ್ರಣದಿಂದ ಮುಕ್ತಗೊಳಿಸಿತ್ತು.
From political to economic diplomacy, energy sector of India has gained international recognition by efficient implementation of initiatives pic.twitter.com/KZVzWbi4vH
— Dharmendra Pradhan (@dpradhanbjp) April 12, 2017
We have developed effective model to ensure that those who can afford should not get the subsidy & those who need, should never be left out.
— Dharmendra Pradhan (@dpradhanbjp) April 12, 2017