ನವದೆಹಲಿ: ಇನ್ಮುಂದೆ ಪ್ರತಿದಿನವೂ ಪೆಟ್ರೋಲ್ ಮತ್ತು ಡೀಸೆಲ್ ರೇಟ್ ಬದಲಾಗಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಮತ್ತು ಡಾಲರ್-ರೂಪಾಯಿ ವಿನಿಮಯ ದರ ಆಧರಿಸಿ ಬದಲಾವಣೆ ಮಾಡಲಾಗುತ್ತದೆ. ಪ್ರತಿ ದಿನವೂ ಬೆಳಗ್ಗೆ 6 ಗಂಟೆಯಿಂದ ಹೊಸ ದರ ಅನ್ವಯವಾಗಲಿದೆ.
ಈವರೆಗೆ 15 ದಿನಕ್ಕೊಮ್ಮೆ ಪೆಟ್ರೋಲ್ ಕಂಪನಿಗಳು ಬೆಲೆ ಏರಿಳಿತ ಮಾಡ್ತಿದ್ದವು ಮತ್ತು ಹೊಸ ದರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುತ್ತಿತ್ತು. ಗುರುವಾರದಂದು ಪೆಟ್ರೋಲ್ ದರವನ್ನು ಲೀಟರ್‍ಗೆ 1 ರೂಪಾಯಿ 12 ಪೈಸೆ ಮತ್ತು ಡೀಸೆಲ್ ಬೆಲೆಯನ್ನು 1 ರೂಪಾಯಿ 24 ಪೈಸೆಯಷ್ಟು ಕಡಿತಗೊಳಿಸಲಾಗಿದೆ.
Advertisement
ಹಾಗಾದ್ರೆ ಪ್ರತಿದಿನ ಪೆಟ್ರೋಲ್‍ಗೆ ಇಷ್ಟು, ಡೀಸೆಲ್‍ಗೆ ಇಷ್ಟು ಬೆಲೆ ಅಂತಾ ತಿಳಿದುಕೊಳ್ಳುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಪ್ರತಿ ದಿನ ಸಂಜೆ 8 ಗಂಟೆಗೆ ಬಂಕ್ ಮಾಲೀಕರಿಗೆ ಮಾರನೇ ದಿನ ವಿಧಿಸಬೇಕಾಗಿರುವ ದರದ ಪಟ್ಟಿ ಲಭ್ಯವಾಗುತ್ತೆ. ಅದನ್ನು ಮಾಲೀಕರು ತಮ್ಮ ಬಂಕ್‍ನಲ್ಲಿ ಪ್ರದರ್ಶಿಸುವುದು ಕಡ್ಡಾಯ. ಗಮನಿಸಬೇಕಾದ ಅಂಶವೆಂದರೆ ಒಂದೇ ನಗರದಲ್ಲಿ ಬೇರೆ-ಬೇರೆ ಬಂಕ್‍ಗಳಲ್ಲಿ ದರ ವ್ಯತ್ಯಾಸವಾಗಿರುತ್ತೆ. ಉದಾಹರಣೆಗೆ ಜಯನಗರದಲ್ಲಿರುವ ರೇಟ್ ಬಸವನಗುಡಿಯಲ್ಲಿ ಇಲ್ಲದೇ ಇರಬಹುದು. ಅಂದರೆ ಒಂದೇ ನಗರದಲ್ಲಿ 10-15 ಪೈಸೆ ಹೆಚ್ಚು ಕಡಿಮೆ ಇರಲಿದೆ.
Advertisement
ಹಾಗಾದ್ರೆ ಗ್ರಾಹಕರು ರೇಟ್ ಬಗ್ಗೆ ತಿಳಿದುಕೊಳ್ಳುವುದು ಹೇಗೆ? ಅದಕ್ಕೆ ಇಲ್ಲಿದೆ ದಾರಿ:
Advertisement
– ಒಂದು ವೇಳೆ ನೀವು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಗ್ರಾಹಕರಾದ್ರೆ RSP< SPACE >DEALER CODE ಟೈಪ್ ಮಾಡಿ 92249 92249 ಸಂಖ್ಯೆಗೆ SMS ಮಾಡಿ. ಅಥವಾ “Fuel@IOC – IndianOil” ಮೊಬೈಲ್ ಅಪ್ಲಿಕೇಷನ್ ಕೂಡಾ ಲಭ್ಯವಿದೆ. ಅಥವಾ ನೇರವಾಗಿ ಇಂಡಿಯನ್ ಆಯಿಲ್ ವೆಬ್‍ಸೈಟ್‍ಗೆ ಹೋಗಿ ಆಯಾ ಪ್ರದೇಶದಲ್ಲಿ ದರ ಎಷ್ಟಿದೆ ಅಂತ ಚೆಕ್ ಮಾಡಬಹುದು.
Advertisement
– ಒಂದು ವೇಳೆ ಹಿಂದೂಸ್ತಾನ್ ಪೆಟ್ರೋಲಿಯಂ ಗ್ರಾಹಕರಾದ್ರೆ HP PRICE DEALER CODE ಟೈಪ್ ಮಾಡಿ 92222 01122 ಸಂಖ್ಯೆಗೆ SMS ಮಾಡಿ. ಅಥವಾ MY HPCL ಮೊಬೈಲ್ ಅಪ್ಲಿಕೇಷನ್ ಡೌನ್‍ಲೋಡ್ ಮಾಡಿಕೊಳ್ಳಿ.
– ಭಾರತ್ ಪೆಟ್ರೋಲಿಯಂ ಗ್ರಾಹಕರಾದ್ರೆ RSP DEALER CODE ಟೈಪ್ ಮಾಡಿ 92231 12222 ಸಂಖ್ಯೆಗೆ SMS ಮಾಡಿ. Smart Drive ಮೊಬೈಲ್ ಅಪ್ಲಿಕೇಷನ್‍ನಲ್ಲೂ ಮಾಹಿತಿ ಲಭ್ಯ. 1800 22 4344 ಟೋಲ್ ಫ್ರೀ ನಂಬರ್‍ಗೆ ಕರೆಮಾಡಬಹುದು.
ಪ್ರತಿ ಬಂಕ್‍ನಲ್ಲೂ ಡೀಲರ್ ಕೋಡ್ ಹಾಕಿರ್ತಾರೆ.
ಇದನ್ನೂ ಓದಿ: ಗಮನಿಸಿ, ಶುಕ್ರವಾರ ಬಂಕ್‍ಗಳಲ್ಲಿ ಪೆಟ್ರೋಲ್ ಸಿಗೋದು ಡೌಟ್
Get the latest fuel price revision by visiting our website. Click here https://t.co/nZZgb5RDJj pic.twitter.com/8Rv1DH0uwU
— Indian Oil Corp Ltd (@IndianOilcl) June 15, 2017
#DailyPriceRevision
DealerNetwork @HPCL to send SMS Text “PRICES” from registered mobile to HPCLSMS Gateway (9222201122) for RSP assistance pic.twitter.com/LYw6Sz5afT
— Hindustan Petroleum Corporation Limited (@HPCL) June 15, 2017