ನವದೆಹಲಿ: ಒಂದು ಬ್ಯಾರೆಲ್ ಪೆಟ್ರೋಲಿಗೆ 19 ಡಾಲರ್ ಇದ್ದಾಗಲೂ ಒಂದು ಲೀಟರ್ ಪೆಟ್ರೋಲ್ ಮೇಲೆ 32 ರೂ. ತೆರಿಗೆ ವಿಧಿಸಿದ್ದೇವೆ. ಈಗ ದರ 75 ಡಾಲರ್‌ಗೆ ಏರಿಕೆ ಆದಾಗಲೂ 32 ರೂ. ತೆರಿಗೆ ವಿಧಿಸುತ್ತಿದ್ದೇವೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, ಪೆಟ್ರೋಲ್ ಬೆಲೆ ಕಡಿಮೆಯಾಗಬೇಕು ಎಂದು ನೀವು ಕೇಳಿದರೆ ನಾನು ಕಡಿಮೆಯಾಗಬೇಕು ಎಂದು ಹೇಳುತ್ತೇನೆ. ಆದರೆ ಯಾಕೆ ಕಡಿಮೆಯಾಗುತ್ತಿಲ್ಲ ಎಂದು ಪ್ರಶ್ನಿಸಿದರೆ ರಾಜ್ಯ ಸರ್ಕಾರಗಳು ಜಿಎಸ್‍ಟಿ ವ್ಯಾಪ್ತಿಗೆ ತರಲು ಅನುಮತಿ ನೀಡುತ್ತಿಲ್ಲ ಎಂಬ ಉತ್ತರ ನೀಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಸೀರೆ ಉಟ್ಟವರಿಗೆ ರೆಸ್ಟೋರೆಂಟ್‍ಗೆ ಪ್ರವೇಶ ಇಲ್ಲ- ವೀಡಿಯೋ ವೈರಲ್
ಪೆಟ್ರೋಲಿನಿಂದ ಬರುತ್ತಿರುವ 32 ರೂಪಾಯಿಯಿಂದ ಸರ್ಕಾರ ಉಚಿತ ಪಡಿತರ, ಉಚಿತ ಮನೆ, ಉಜ್ವಲಾ ಸೇರಿದಂತೆ ಜನರಿಗಾಗಿ ಹಲವು ಯೋಜನೆಗಳನ್ನು ಜಾರಿ ಮಾಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೋವಿಡ್‍ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ವಿತರಣೆ
ಪಶ್ಚಿಮ ಬಂಗಾಳದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 100 ರೂ. ದಾಟಲು ಟಿಎಂಸಿ ಸರ್ಕಾರವೇ ಕಾರಣ. ಬಂಗಾಳ ಸರ್ಕಾರ ಭಾರೀ ತೆರಿಗೆ ಹಾಕುತ್ತಿರುವುದರಿಂದ ಬೆಲೆ ಏರಿಕೆಯಾಗಿದೆ ಎಂದರು.