ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ (Crude Oil Prices) ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ (India) ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ.
ಕಚ್ಚಾ ತೈಲ ಬೆಲೆ ಒಂಬತ್ತು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿರುವ ಕಾರಣ ಇಂಧನ ಬೆಲೆಯನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಸರ್ಕಾರದ ಉನ್ನತ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.
ಕಚ್ಚಾ ತೈಲ ಬೆಲೆಗಳು ಜನವರಿ 2024 ರಿಂದ ಕಡಿಮೆ ಮಟ್ಟಕ್ಕೆ ಕುಸಿದಿವೆ. ತೈಲ ಬೆಲೆ ಇಳಿಕೆಯಿಂದ ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಲಾಭವಾಗುತ್ತಿರುವ ಕಾರಣ ಬೆಲೆ ಇಳಿಕೆಯಾಗಬಹುದು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಹಿಮಾಚಲದಲ್ಲಿ ಗಾಂಜಾ ಕೃಷಿ ಕಾನೂನುಬದ್ಧ – ಆರ್ಥಿಕತೆಯನ್ನು ಹೆಚ್ಚಿಸಲು ಅನುಕೂಲ ಎಂದ ಸರ್ಕಾರ
ಅಮೆರಿಕದಲ್ಲಿ (USA) ಆರ್ಥಿಕ ಹಿಂಜರಿತದ (Recession Fear) ಭಯದ ನಡುವೆ ಬ್ರೆಂಟ್ ಕಚ್ಚಾ ತೈಲವು ಕುಸಿಯುತ್ತಿದೆ. ಶುಕ್ರವಾರ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 73.17 ಡಾಲರ್ (6,143 ರೂ.) ವೆಸ್ಟ್ ಟೆಕ್ಸಸ್ ಇಂಟರ್‌ಮೀಡಿಯೆಟ್ (WTI) ದರ 69.63 ಡಾಲರ್ (5,847 ರೂ.) ವ್ಯವಹಾರ ನಡೆಸಿತ್ತು. ಇದನ್ನೂ ಓದಿ: ರಾಜಸ್ಥಾನದಲ್ಲಿ ಎರಡನೇ ಇನ್ನಿಂಗ್ಸ್ – ರಾಯಲ್ಸ್ ಕೋಚ್ ಆಗಿ ದ್ರಾವಿಡ್ ನೇಮಕ
ಅಮೆರಿಕದ (USA) ಸೇವಾ ವಲಯದ ಚಟುವಟಿಕೆಯು ಆಗಸ್ಟ್‌ನಲ್ಲಿ ಸ್ಥಿರವಾಗಿದ್ದರೆ ಖಾಸಗಿ ಉದ್ಯೋಗಗಳ ಬೆಳವಣಿಗೆ ದರ ನಿಧಾನವಾಗುತ್ತಿದ್ದು ಉದ್ಯೋಗ ಕಡಿತ (Job Cut) ಆರಂಭವಾಗಿದೆ. ಇದರ ನೇರ ಪರಿಣಾಮ ತೈಲ ಮಾರುಕಟ್ಟೆ ಮತ್ತು ಸ್ಟಾಕ್ ಮಾರುಕಟ್ಟೆಯ ಮೇಲೆ ಬೀಳುತ್ತಿದೆ. ಶುಕ್ರವಾರ ಸೆನ್ಸೆಕ್ಸ್ 1,017.23 ಅಂಕ ಪತನಗೊಂಡರೆ ನಿಫ್ಟಿ 292.95 ಅಂಕ ಕುಸಿತ ಕಂಡಿತ್ತು.
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮಾರ್ಚ್ 14 ರಂದು ಪ್ರತಿ ಲೀಟರ್ ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆಯಲ್ಲಿ 2 ರೂ. ಕಡಿತಗೊಳಿಸಿದ್ದವು.
ಹರ್ಯಾಣ ಮತ್ತು ಜಮ್ಮು ಕಾಶ್ಮೀರದಲ್ಲಿ ಚುನಾವಣೆ (Election) ಘೋಷಣೆಯಾಗಿದ್ದರೆ ಮಹಾರಾಷ್ಟ್ರದಲ್ಲಿ ಈ ವರ್ಷದ ಅಂತ್ಯದಲ್ಲಿ ಚುನಾವಣೆ ನಡೆಯಲಿದೆ. ಜೊತೆಗೆ ವಿಧಾನಸಭೆ ಮತ್ತು ಲೋಕಸಭೆಗೆ ಉಪಚುನಾವಣೆ ನಡೆಯಬೇಕಿದೆ. ಈ ಕಾರಣಕ್ಕೆ ಶೀಘ್ರವೇ ತೈಲ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ.
ಪ್ರಸ್ತುತ ಬೆಂಗಳೂರಿನಲ್ಲಿ ಪ್ರತಿ ಲೀಟರ್‌ಪೆಟ್ರೋಲ್‌ಗೆ 102.86 ರೂ. ಇದ್ದರೆ ಡೀಸೆಲ್‌ಗೆ 88.94 ರೂ. ಇದೆ.