ನವದೆಹಲಿ: ಪೆಟ್ರೋಲ್, ಡೀಸೆಲ್ ದರ ಪ್ರತಿನಿತ್ಯ ಏರಿಕೆಯಾಗುತ್ತಿದ್ದು ಕರ್ನಾಟಕದಲ್ಲಿ 80ರ ಗಡಿ ದಾಟಿದೆ. ಪೆಟ್ರೋಲ್ ದರ ಭಾರತದಲ್ಲಿ ಮಾತ್ರ ಏರಿಕೆಯಾಗುತ್ತಿದೆಯೋ? ಬೇರೆ ಕಡೆ ಏರಿಕೆಯಾದರೆ ಎಷ್ಟು ರೂ. ಇದೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಹೀಗಾಗಿ ಇಲ್ಲಿ ಅಮೆರಿಕ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ಇಂಗ್ಲೆಂಡ್ ದೇಶಗಳ ಪೆಟ್ರೋಲ್, ಡೀಸೆಲ್ ಬೆಲೆಯನ್ನು ನೀಡಲಾಗಿದೆ.
ಅಮೆರಿಕದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 0.54 ಡಾಲರ್(53.88 ರೂ.), ಇದ್ದರೆ ಡೀಸೆಲ್ ಬೆಲೆ 0.83 ಡಾಲರ್(58.9 ರೂ.) ಇದೆ. ಅಮೆರಿಕ ವಿಶ್ವದ ಪೆಟ್ರೋಲ್ ಉತ್ಪದನಾ ರಾಷ್ಟ್ರಗಳಲ್ಲಿ ಒಂದಾಗಿದ್ದು, ಪ್ರತಿದಿನ 14.86 ದಶಲಕ್ಷ ಬ್ಯಾರಲ್(ವಿಶ್ವದ 15.3%) ಕಚ್ಚಾ ತೈಲವನ್ನು ಉತ್ಪಾದನೆ ಮಾಡುತ್ತಿದೆ. ಒಪೆಕ್ ರಾಷ್ಟ್ರಗಳ ಅತಿ ಹೆಚ್ಚು ಉತ್ಪಾದನೆ ಮಾಡುವ ಸೌದಿ ಅರೇಬಿಯಾ ಪ್ರತಿ ದಿನ 12.39 ದಶಲಕ್ಷ ಬ್ಯಾರಲ್ ತೈಲವನ್ನು ಉತ್ಪಾದನೆ ಮಾಡುತ್ತಿದೆ. ಇದನ್ನು ಓದಿ: ನೂರರ ಗಡಿಯತ್ತ ತೈಲ ಬೆಲೆ: ಪೆಟ್ರೋಲ್‍ನಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಪಾಲು ಎಷ್ಟು? ಕೇಂದ್ರ ಹೇಳೋದು ಏನು?
Advertisement
Advertisement
ಪಾಕಿಸ್ತಾನದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 112.8 ಪಾಕಿಸ್ತಾನ ರೂ.(ಭಾರತದ 65.2 ರೂ.) ಇದ್ದರೆ, ಡೀಸೆಲ್ ಬೆಲೆ 106.57 ಪಾಕಿಸ್ತಾನ ರೂ.( ಭಾರತದ 106.57 ರೂ.) ಇದೆ.
Advertisement
ಭಾರತದಲ್ಲಿ ಪ್ರತಿದಿನ ತೈಲ ಬೆಲೆ ಪರಿಷ್ಕರಣೆ ಆಗುತ್ತಿದ್ದರೆ ಶ್ರೀಲಂಕಾದಲ್ಲಿ ಪ್ರತಿ ತಿಂಗಳ 10 ರಂದು ತೈಲ ಬೆಲೆ ಪರಿಷ್ಕರಣೆಯಾಗುತ್ತದೆ. ಕೆಲ ಸಮಯದ ಹಿಂದೆ ಶ್ರೀಲಂಕಾ ಈ ನೀತಿಯನ್ನು ಅಳವಡಿಸಿದ್ದು ಪ್ರಸ್ತುತ ಈಗ ಒಂದು ಲೀಟರ್ ಪೆಟ್ರೋಲ್ ಬೆಲೆ 157 ಶ್ರೀಲಂಕಾ ರೂಪಾಯಿ(ಭಾರತದ 69.14 ರೂ.) ಇದ್ದರೆ, ಡೀಸೆಲ್ ಬೆಲೆ 118 ಶ್ರೀಲಂಕಾ ರೂಪಾಯಿ(51.9 ರೂ.) ಇದೆ.
Advertisement
ನೇಪಾಳದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 111 ನೇಪಾಳಿ ರೂ.(ಭಾರತದ 71.25 ರೂ.) ಇದ್ದರೆ ಡೀಸೆಲ್ ಬೆಲೆ 95 ನೇಪಾಳಿ ರೂ.(59.43 ರೂ.) ಇದೆ.
ಅತಿ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡುವ ದೇಶಗಳ ಪೈಕಿ 2017ರಿಂದ ಚೀನಾ ಮೊದಲ ಸ್ಥಾನ ಪಡೆದಿದ್ದು ಪ್ರತಿ ಲೀಟರ್ ಪೆಟ್ರೋಲ್ ಗೆ 7.57 ಯುವಾನ್(78.95 ರೂ.) ಇದ್ದರೆ ಡೀಸೆಲ್ ಬೆಲೆ 6.76 ಯುವಾನ್(70.49 ರೂ. ಇದೆ). ಪ್ರತಿ ದಿನ ಚೀನಾ 8.4 ದಶಲಕ್ಷ ಬ್ಯಾರಲ್ ತೈಲ ಅಮದು ಮಾಡಿಕೊಳ್ಳುತ್ತಿದೆ. ಅಮೆರಿಕ ವಾಣಿಜ್ಯ ಸಮರ ಆರಂಭಿಸಿದ ಬಳಿಕ ಚೀನಾ ಕರೆನ್ಸಿ ಡಾಲರ್ ಮುಂದೆ ದುರ್ಬಲವಾಗುತ್ತಿದ್ದು ತೈಲ ಬೆಲೆ ಏರತೊಡಗಿದೆ.
ಯುರೋಪಿಯನ್ ದೇಶಗಳ ಪೈಕಿ ಇಂಗ್ಲೆಂಡ್ ಅತಿ ಹೆಚ್ಚು ತೆರಿಗೆಯನ್ನು ತೈಲದ ಮೇಲೆ ವಿಧಿಸಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 5.91 ಪೌಂಡ್(119.9 ರೂ.) ಇದ್ದರೆ ಡೀಸೆಲ್ ಬೆಲೆ 6.03 ಪೌಂಡ್(121.8 ರೂ.) ಇದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv