ಪಂಜಾಬ್‌ನಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

Public TV
1 Min Read
PETROL 1

ಚಂಡೀಗಢ: ಪಂಜಾಬ್‌ನಲ್ಲಿ (Punjab) 300 ಯೂನಿಟ್‌ ಉಚಿತ ವಿದ್ಯುತ್‌ ನೀಡುತ್ತಿರುವ ಆಪ್‌ ಸರ್ಕಾರ (AAP Government) ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ (VAT) ಹೆಚ್ಚಿಸಿ ಸವಾರರಿಗೆ ಶಾಕ್ ನೀಡಿದೆ.

ಪ್ರತಿ ಲೀಟರ್ ಪೆಟ್ರೋಲ್ (Petrol) ಬೆಲೆಯಲ್ಲಿ 96 ಪೈಸೆ ಹೆಚ್ಚಳ ಮಾಡಲಾಗಿದೆ. ಪ್ರತಿ ಲೀಟರ್ ಡೀಸೆಲ್ (Diesel) ಬೆಲೆಯಲ್ಲಿ 88 ಪೈಸೆ ಹೆಚ್ಚಾಗಿದೆ. ಈ ದರದೊಂದಿಗೆ ರಾಜ್ಯದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 98.65 ರೂ. ಆಗಿದ್ದರೆ ಪ್ರತಿ ಲೀಟರ್‌ ಡೀಸೆಲ್‌ ಬೆಲೆ 88.95 ರೂ. ಗೆ ಏರಿಕೆಯಾಗಿದೆ.  ಇದನ್ನೂ ಓದಿ: ಕಾಂಗ್ರೆಸ್‌ ಷರತ್ತುಗಳಿಗೆ ಅಪಸ್ವರ ಎತ್ತಿದ ಶಾಮನೂರು

ಈ ವ್ಯಾಟ್‌ ಏರಿಕೆಯಿಂದ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ 600 ಕೋಟಿ ರೂ. ಆದಾಯ ಸಂಗ್ರಹವಾಗುವ ಸಾಧ್ಯತೆಯಿದೆ.

ಆಪ್‌ ಸರ್ಕಾರ ಪಂಜಾಬ್‌ನಲ್ಲಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಎರಡನೇ ಬಾರಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಾಗಿದೆ. ಈ ಫೆಬ್ರವರಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌  ಮೇಲೆ 90 ಪೈಸೆ ದರವನ್ನು ಏರಿಕೆ ಮಾಡಿತ್ತು.

Share This Article