ಬೆಂಗಳೂರು: ದೇಶದಲ್ಲಿ ಈ ಮೊದಲು 12 ಅಥವಾ 15 ದಿನಕ್ಕೊಮ್ಮೆ ತೈಲದರ ಪರಿಷ್ಕರಣೆ ಆಗುತ್ತಿತ್ತು. ಆದರೆ ಜೂನ್ 15, 2017ರಿಂದ ಪ್ರತಿದಿನ ಪರಿಷ್ಕರಣೆ ಆಗುತ್ತಿದೆ. ಅದರಂತೆ, ಆಗಸ್ಟ್ 31ರಿಂದ ಇವತ್ತಿನ ವರಗೆ ನಿರಂತರವಾಗಿ 12 ದಿನಗಳಲ್ಲಿ ಲೀಟರ್ ಪೆಟ್ರೋಲ್ ಗೆ ಬರೋಬ್ಬರಿ 3 ರೂಪಾಯಿ ಹಾಗೂ ಡೀಸೆಲ್ ಲೀಟರ್‍ಗೆ ಎರಡೂವರೆ ರೂಪಾಯಿ ದುಬಾರಿಯಾಗಿದೆ. ಬೆಂಗಳೂರಿನಲ್ಲಿ ಸೆಪ್ಟೆಂಬರ್ 1ರಿಂದ ಇವತ್ತಿನವರೆಗೆ 10 ದಿನದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು ಏರಿಕೆಯಾಗಿದೆ.
- ದಿನಾಂಕ ಪೆಟ್ರೋಲ್ ಡೀಸೆಲ್
* ಸೆಪ್ಟೆಂಬರ್ 10 83.36 (24 ಪೈಸೆ) 75.18 (23 ಪೈಸೆ)
* ಸೆಪ್ಟೆಂಬರ್ 9 83.12 (12 ಪೈಸೆ) 74.95 (11 ಪೈಸೆ)
* ಸೆಪ್ಟೆಂಬರ್ 8 83.00 (40 ಪೈಸೆ) 74.84 (45 ಪೈಸೆ)
* ಸೆಪ್ಟೆಂಬರ್ 7 82.60 (57 ಪೈಸೆ) 74.39 (60 ಪೈಸೆ)
* ಸೆಪ್ಟೆಂಬರ್ 6 82.03 (14 ಪೈಸೆ) 73.79 (16 ಪೈಸೆ)
* ಸೆಪ್ಟೆಂಬರ್ 5 81.89 (ಏರಿಕೆ ಆಗಿಲ್ಲ) 73.63 (ಏರಿಕೆ ಆಗಿಲ್ಲ)
* ಸೆಪ್ಟೆಂಬರ್ 4 81.89 (17 ಪೈಸೆ) 73.63 (19 ಪೈಸೆ)
* ಸೆಪ್ಟೆಂಬರ್ 3 81.72 (32 ಪೈಸೆ) 73.44 (41 ಪೈಸೆ)
* ಸೆಪ್ಟೆಂಬರ್ 2 81.40 (13 ಪೈಸೆ) 73.03 (32 ಪೈಸೆ)
* ಸೆಪ್ಟೆಂಬರ್ 1 81.27 (20 ಪೈಸೆ) 72.71 (25 ಪೈಸೆ)
ತೈಲದರ ಏರಿಕೆಯನ್ನು ನಿಯಂತ್ರಿಸಲು ಕೇಂದ್ರದ ಮೋದಿ ಸರ್ಕಾರ ಕನಿಷ್ಠ ಮಧ್ಯ ಪ್ರವೇಶದ ಯತ್ನವನ್ನೂ ಮಾಡಿಲ್ಲ. ಇದು ಜನ ಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಇದು `ಹಗಲು ಲೂಟಿ’ ಅಂತ ಕಾಂಗ್ರೆಸ್ ಆರೋಪಿಸಿದೆ. ತತ್‍ಕ್ಷಣವೇ ತೈಲದರ ಕಡಿಮೆ ಮಾಡುವುದು, ಹಾಗೂ ಪೆಟ್ರೋಲ್-ಡೀಸೆಲ್ ದರವನ್ನು ಜಿಎಸ್‍ಟಿ ವ್ಯಾಪ್ತಿಗೆ ತರಬೇಕು ಅಂತ ಆಗ್ರಹಿಸಿದೆ. ಹೀಗಾಗಿ, ಕಾಂಗ್ರೆಸ್ ನೇತೃತ್ವದಲ್ಲಿ ದೇಶದ 21 ಪಕ್ಷಗಳು ಇವತ್ತು ಭಾರತ್ ಬಂದ್ ನಡೆಡುತ್ತಿವೆ.
Advertisement
Advertisement
ದೇಶವ್ಯಾಪಿ ಸಾವಿರಾರು ಸಂಘಟನೆಗಳು ಬೆಂಬಲ ಸೂಚಿಸಿವೆ. ಅಂದಹಾಗೆ, ಮೇ 2014ರಲ್ಲಿ ಮೋದಿ ಸರ್ಕಾರ ಬಂದಾಗಿನಿಂದ ತೈಲದರದ ಮೇಲಿನ ಅಬಕಾರಿ ಸುಂಕ 12 ಬಾರಿ ಹೆಚ್ಚಾಗಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಶೇ.211.7ರಷ್ಟು ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕ ಬರೋಬ್ಬರಿ ಶೇ. 443.06ರಷ್ಟು ಹೆಚ್ಚಾಗಿದೆ. 414 ರೂಪಾಯಿ ಇದ್ದ ಗ್ಯಾಸ್ ಸಿಲಿಂಡರ್ ದರ 754 ರೂಪಾಯಿಗೆ ದುಪ್ಪಟ್ಟಾಗಿದೆ ಅಂತ ಕಾಂಗ್ರೆಸ್ ಅರೋಪಿಸಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv