ನವದೆಹಲಿ: ಜೂನ್ 16ರಿಂದ ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಣೆ ಆಗಲಿದೆ. ಹೀಗಾಗಿ ಈ ಬೆಲೆಯನ್ನು ಗ್ರಾಹಕರು ತಿಳಿದುಕೊಳ್ಳುವುದು ಹೇಗೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ.
ಇಂಡಿಯನ್ ಆಯಿಲ್ :
SMS: RSP < SPACE > DEALER CODE ಎಂದು ಟೈಪಿಸಿ, 9224992249 ಸಂಖ್ಯೆಗೆ SMS ಕಳುಹಿಸುವುದು. ಇಲ್ಲಿ ಡೀಲರ್ ಕೋಡ್ ಎಂದಿರುವ ಕಡೆ ಡೀಲರ್ ಕೋಡ್ ಸಂಖ್ಯೆ ಹಾಕಬೇಕು.
ವೆಬ್‍ಸೈಟ್ : www.iocl.com ವೆಬ್‍ಸೈಟ್‍ಗೆ ಭೇಟಿ ನೀಡಿ Pump Locator ಆಯ್ಕೆ ಮೂಲಕ ದರ ತಿಳಿಯಬಹುದು.
ಆ್ಯಪ್ : Fuel@loc ಆ್ಯಪ್ ಪೆಟ್ರೋಲ್ ಪಂಪ್ ಗುರುತಿಸಿ, ದರ ತಿಳಿಯಬಹುದಾಗಿದೆ.
Advertisement
ಭಾರತ್ ಪೆಟ್ರೋಲಿಯಂ
SMS: RSP < SPACE > DEALER CODE ಎಂದು ಟೈಪಿಸಿ 9223112222 ಸಂಖ್ಯೆಗೆ SMS ಕಳುಹಿಸುವುದು. ಇಲ್ಲಿ ಡೀಲರ್ ಕೋಡ್ ಎಂದಿರುವ ಕಡೆ ಡೀಲರ್ ಕೋಡ್
ಸಂಖ್ಯೆ ಹಾಕಬೇಕು.
ವೆಬ್‍ಸೈಟ್ : www.hindustanpetroleum.com ವೆಬ್‍ಸೈಟ್‍ಗೆ ಭೇಟಿ ನೀಡಿ, Pump Locator ಆಯ್ಕೆ ಮೂಲಕ ದರ ತಿಳಿಯಬಹುದು.
ಆ್ಯಪ್ : SmartDrive Mobli ಆ್ಯಪ್ ಪೆಟ್ರೋಲ್ ಪಂಪ್ ಗುರುತಿಸಿ, ದರ ತಿಳಿಯಬಹುದು.
Advertisement
ಹಿಂದುಸ್ತಾನ್ ಪೆಟ್ರೋಲಿಯಂ :
SMS: RSP < SPACE > DEALER CODE ಎಂದು ಟೈಪಿಸಿ 9222201122 ಸಂಖ್ಯೆಗೆ SMS ಕಳುಹಿಸುವುದು. ಇಲ್ಲಿ ಡೀಲರ್ ಕೋಡ್
ಎಂದಿರುವ ಕಡೆ ಡೀಲರ್ ಕೋಡ್ ಸಂಖ್ಯೆ ಹಾಕಬೇಕು.
ವೆಬ್‍ಸೈಟ್ : www.hindustanpetroleum.com ವೆಬ್‍ಸೈಟ್‍ಗೆ ಭೇಟಿ ನೀಡಿ, Pump Locator ಆಯ್ಕೆ ಮೂಲಕ ದರ ತಿಳಿಯಬಹುದು.
ಆ್ಯಪ್ : My HPCL ಆ್ಯಪ್‍ನಲ್ಲಿ ಪೆಟ್ರೋಲ್ ಪಂಪ್ ಗುರುತಿಸಿ, ದರ ತಿಳಿಯಬಹುದು
Advertisement
ಪ್ರಾಯೋಗಿಕವಾಗಿ ಮೇ 1ರಿಂದ ದೇಶದ ಐದು ಮಹಾನಗರಗಳಾದ ಪಾಂಡಿಚೇರಿ, ಆಂಧ್ರಪ್ರದೇಶದ ವೈಝಾಗ್, ರಾಜಸ್ಥಾನದ ಉದಯ್‍ಪುರ್, ಜಾರ್ಖಂಡ್‍ನ ಜಮ್ಶೆಡ್‍ಪುರ ಚಂಡೀಗಢದಲ್ಲಿ ಪ್ರತಿ ದಿನ ದರ ಪರಿಷ್ಕರಣೆ ಆಗುತಿತ್ತು. ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಜೂನ್ 16ರಿಂದ ದೇಶದ ಎಲ್ಲ ಕಡೆಗಳಲ್ಲಿ ಜಾರಿಗೊಳಿಸಲು ತೈಲ ಕಂಪೆನಿಗಳು ಮುಂದಾಗಿವೆ.
Advertisement
ಪ್ರಮುಖ 5 ಮಹಾನಗರಗಳಲ್ಲಿ ಈ ಯೋಜನೆಯನ್ನು ಜಾರಿಗೆ ತಂದ ಬಳಿಕ, ದೇಶದ ಉಳಿದ ಭಾಗದಲ್ಲಿ ಜಾರಿಗೊಳಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಏಪ್ರಿಲ್ ನಲ್ಲಿ ತಿಳಿಸಿದ್ದರು.
ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪ್ರಸ್ತುತ ದೇಶದಲ್ಲಿ ಶೇ.95ರಷ್ಟು ಮಾರುಕಟ್ಟೆಯನ್ನು ಹೊಂದಿದ್ದು, ಈ ಎಲ್ಲ ತೈಲ ಕಂಪೆನಿಗಳ ಅಧಿಕಾರಿಗಳು ಏಪ್ರಿಲ್ 5ರಂದು ಧರ್ಮೇಂದ್ರ ಪ್ರಧಾನ್ ಜೊತೆ ಮಾತುಕತೆ ನಡೆಸಿದ್ದರು.
ಪ್ರತಿದಿನ ತೈಲ ಬೆಲೆಯನ್ನು ಪರಿಷ್ಕರಿಸಬೇಕು ಎನ್ನುವ ಪ್ರಸ್ತಾಪ ಈ ಹಿಂದೆಯೇ ಇತ್ತು. ಆದರೆ ಇಲ್ಲಿಯವರೆಗೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ದೇಶದಲ್ಲಿ ಸುಮಾರು 58 ಸಾವಿರ ಬಂಕ್‍ಗಳನ್ನು ಹೊಂದಿರುವ ಈ ತೈಲ ಕಂಪೆನಿಗಳು ಕಾರ್ಯರೂಪಕ್ಕೆ ತರಲು ಮುಂದಾಗಿದೆ.