ನವದೆಹಲಿ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಗುರುವಾರ ಡಿಸೇಲ್ ಬೆಲೆ ಸಾರ್ವಕಾಲಿಕ ಗರಿಷ್ಟ ದರ ತಲುಪಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆಯೂ ಮೂರು ವರ್ಷಗಳಲ್ಲೇ ಗರಿಷ್ಟ ಮಟ್ಟ ತಲುಪಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್ 61.88ರೂ. ಮತ್ತು ಪೆಟ್ರೋಲ್ ಬೆಲೆ 71.27 ರೂ. ಏರಿಕೆಯಾಗಿದೆ.
ಇದರೊಂದಿಗೆ ಒಂದು ದಿನದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 7 ಪೈಸೆ ಹೆಚ್ಚಳವಾಗಿದ್ದರೆ, ಡೀಸೆಲ್ ಬೆಲೆ 14 ರಿಂದ 16 ಪೈಸೆ ಹೆಚ್ಚಳವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 72.39 ರೂ. ಇದ್ದರೆ ಡೀಸೆಲ್ 62.92 ರೂ. ಗೆ ಏರಿಕೆಯಾಗಿದೆ.
Advertisement
ವಾಣಿಜ್ಯ ನಗರಿ ಮುಂಬೈ ನಲ್ಲಿ ದೇಶದಲ್ಲೇ ಅv ತೈಲ ಬೆಲೆ ಹೊಂದಿದ್ದು, ಪತ್ರಿ ಲೀಟರ್ ಪೆಟ್ರೋಲ್ ಬೆಲೆ ಗರಿಷ್ಟ 79.17 ರೂ ತಲುಪಿದೆ. ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 65.90 ರೂ ತಲುಪಿದೆ. ಚೆನ್ನೈ ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 74 ರೂ. ತಲುಪಿದ್ದು, ಡೀಸೆಲ್ 65.23 ರೂ. ಗೆ ಹೆಚ್ಚಳವಾಗಿದೆ.
Advertisement
ಸೋಮವಾರ ಬ್ರೆಂಟ್ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್ ಗೆ 70.37 ಡಾಲರ್(4,495 ರೂ.) ತಲುಪಿದೆ. 2014 ರ ನಂತರ ಅಂತರಾಷ್ಟ್ರೀಯ ಕಚ್ಚಾತೈಲ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ದರ ಇದಾಗಿದೆ. ಏಪ್ರಿಲ್ ನಲ್ಲಿ ಪ್ರತಿ ಬ್ಯಾರೆಲ್ ಗೆ 52.49 ಡಾಲರ್(3353 ರೂ.) ಇದ್ದರೆ ಡಿಸೆಂಬರ್ ನಲ್ಲಿ 62 ಡಾಲರ್(39600 ರೂ.) ಇತ್ತು. ಈ ಅವಧಿಯಲ್ಲಿ ತೈಲ ದರ 18% ಏರಿಕೆಯಾಗಿದೆ.
Advertisement
ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲ್: ಮುಂದಿನ ಸರಕು ಮತ್ತು ಸೇವಾ ತೆರಿಗೆ ಮಂಡಳಿಯ ಸಭೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ತರುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ವ್ಯಾಟ್ ಇಳಿಸಲ್ಲ: ಸಿಎಂ ಸಿದ್ದರಾಮಯ್ಯ
Advertisement
ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಿದರೆ ಜನ ಸಾಮಾನ್ಯರ ಮೇಲಿನ ಹೊರೆಯನ್ನು ತಕ್ಕಮಟ್ಟಿಗೆ ಇಳಿಸಬಹುದು. 2017ರ ಅಕ್ಟೋಬರ್ನಲ್ಲಿ ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಪರಿಣಾಮ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 56.89 ರೂ. ಮತ್ತು 68.38 ರೂ.ಗೆ ಇಳಿದಿತ್ತು. ಹೀಗಿದ್ದರೂ, ನಂತರ ಅಂತರಾಷ್ಟ್ರೀಯ ದರ ಏರಿಕೆಯಿಂದ ತೈಲ ದರ ಹೆಚ್ಚಳವಾಗಿದೆ ಎಂಬುದಾಗಿ ವರದಿಯಾಗಿದೆ. ಇದನ್ನೂ ಓದಿ: ಜಿಎಸ್‍ಟಿ ಅಡಿ ಪೆಟ್ರೋಲ್ ಬಂದ್ರೆ ಬೆಂಗ್ಳೂರಿನಲ್ಲಿ ಪ್ರತಿ ಲೀಟರ್‍ಗೆ 40 ರೂ.ಅಷ್ಟೇ!
2017ರ ಅಕ್ಟೋಬರ್ 3ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 2 ರೂ. ಕಡಿತಗೊಳಿಸಿತ್ತು. ಬೆಲೆ ಏರಿಕೆಯಂದ ಜನಸಾಮಾನ್ಯರ ಮೇಲೆ ಆಗುತ್ತಿರುವ ಹೊರೆಯನ್ನು ತಪ್ಪಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅಬಕಾರಿ ಮತ್ತು ಸೀಮಾ ಸುಂಕ ಮಡಳಿ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿತ್ತು.
2014ರಿಂದ 2016ರ ಅವಧಿಯಲ್ಲಿ ಕೇಂದ್ರ ಸರ್ಕಾರ 9 ಬಾರಿ ಅಬಕಾರಿ ಸುಂಕವನ್ನು ಹೆಚ್ವಿಸಿತ್ತು. ಈ ಅವಧಿಯಲ್ಲಿ ಪೆಟ್ರೋಲ್ ಮೇಲೆ 11.77 ರೂ., ಡೀಸೆಲ್ ಮೇಲೆ 13.47 ರೂ. ನಂತೆ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಇದರಿಂದಾಗಿ 2014-15 ರಲ್ಲಿ ಬೊಕ್ಕಸಕ್ಕೆ 99 ಕೋಟಿ ರೂ.ಬಂದಿದ್ದರೆ, 2016-17 ನೇ ಅವಧಿಯಲ್ಲಿ 2.42 ಲಕ್ಷ ಕೋಟಿ ರೂ. ಆದಾಯ ಬಂದಿತ್ತು. ಇದನ್ನೂ ಓದಿ: 70 ರೂ. ಪೆಟ್ರೋಲ್ ನಲ್ಲಿ ಯಾರಿಗೆ ಎಷ್ಟು ಪಾಲು? ಬೇರೆ ರಾಷ್ಟ್ರಗಳಲ್ಲಿ ಎಷ್ಟು ದರವಿದೆ?
The revised #GST rates will be applicable from January 25: FM Arun Jaitley after GST meet pic.twitter.com/35prta4StM
— ANI (@ANI) January 18, 2018
GST Council today approved rate changes of 29 goods and 53 categories of services: Finance Minister Arun Jaitley after GST meet pic.twitter.com/u0ZoGh7gkN
— ANI (@ANI) January 18, 2018