ಬೆಂಗಳೂರು: ಜೂನ್ 15ರ ಮಧ್ಯರಾತ್ರಿಯಿಂದ ಪೆಟ್ರೋಲ್ ಬಂಕ್‍ಗಳು ಒಂದು ದಿನ ಬಂದ್ ಆಗಲಿವೆ. ಕೇಂದ್ರ ಸರ್ಕಾರದ ದರ ಪರಿಷ್ಕರಣೆಯನ್ನು ವಿರೋಧಿಸಿ ಜೂನ್ 16ರಂದು ಪೆಟ್ರೋಲ್ ಬಂಕ್‍ಗಳು ಮುಷ್ಕರ ನಡೆಸಲಿವೆ.
Advertisement
ಜೂನ್ 16ರಿಂದ ಕೇಂದ್ರ ಸರ್ಕಾರ ಹೊಸ ನಿಯಮದ ಪ್ರಕಾರ ಪ್ರತಿನಿತ್ಯ ಪಟ್ರೋಲ್ ಹಾಗು ಡೀಸೆಲ್ ಬೆಲೆ ಪರಿಷ್ಕರಣೆ ಆಗಲಿದೆ. ಆದ್ರೆ ಅಂದೇ ಪೆಟ್ರೋಲ್ ಬಂಕ್ ಮಾಲೀಕರು ಸರ್ಕಾರದ ಈ ಹೊಸ ನೀತಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ಪೆಡರೇಷನ್ ಆಫ್ ಪೆಟ್ರೋಲಿಯಂ ಡೀಲರ್ಸ್ ರಾಜ್ಯಾದ್ಯಂತ ಪೆಟ್ರೋಲ್ ಬಂಕ್ ಬಂದ್‍ಗೆ ಕರೆ ನೀಡಲಾಗಿದೆ.
Advertisement
Advertisement
ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಪೆಟ್ರೋಲ್ ಬಂಕ್‍ಗಳು ಅಂದು ಬಂದ್ ಆಗಲಿದೆ ಅಂತಾ ಹೇಳಲಾಗಿದೆ. ಈ ಹೊಸ ನೀತಿಯಿಂದ ನಮ್ಗೆ ನಷ್ಟವಾಗುತ್ತೆ, ನಮ್ಮ ಮೇಲೆ ತೈಲ ಕಂಪನಿಗಳು ಸರ್ಕಾರ ಸವಾರಿ ಮಾಡುತ್ತಿದೆ ಅಂತಾ ಡೀಲರ್ಸ್ ಹೇಳಿದ್ದಾರೆ.
Advertisement