ಮೈಸೂರು: ಪ್ರತಿನಿತ್ಯ ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಣೆ ಮಾಡಬೇಕೆಂಬ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಮೈಸೂರು ವಿಭಾಗದ ಪೆಟ್ರೋಲ್ ಬಂಕ್‍ಗಳನ್ನ ಇಂದು ಬಂದ್ ಮಾಡಲಾಗಿದೆ. ಈ ನಡುವೆ ಇಲ್ಲಿನ ಪೆಟ್ರೋಲ್ ಬಂಕ್‍ವೊಂದರಲ್ಲಿ ಹೈಡ್ರಾಮಾ ನಡೆದಿದೆ.
Advertisement
ಅಧಿಕಾರಿಗಳ ಒತ್ತಡದಿಂದ ಲಕ್ಷ್ಮೀ ಸರ್ವಿಸ್ ಸ್ಟೇಷನ್ ಬಂಕ್ ಮಾಲೀಕರು ಬಾಗಿಲು ತೆರೆದು ಪೆಟ್ರೋಲ್ ಹಾಕುತ್ತಿದ್ರು. ಆಗ ಇತರೆ ಬಂಕ್‍ಗಳ ಮಾಲೀಕರು ಮುತ್ತಿಗೆ ಹಾಕಿ ಕೂಡಲೇ ಪೆಟ್ರೋಲ್, ಡೀಸೆಲ್ ಮಾರಟ ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ರು. ಇದು ಅಧಿಕಾರಿಗಳು ಮತ್ತು ಬಂಕ್ ಮಾಲೀಕರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಬಳಿಕ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದ ವಾಹನ ಸವಾರರನ್ನು ಬಂಕ್ ಮಾಲೀಕರು ವಾಪಸ್ ಕಳುಹಿಸಿದ್ರು. ಕೂಡಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ರು.
Advertisement
ಇದನ್ನೂ ಓದಿ: ಇನ್ಮುಂದೆ ಪ್ರತಿದಿನ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ- ಪ್ರತಿದಿನದ ರೇಟ್ ಚೆಕ್ ಮಾಡೋದು ಹೇಗೆ?
Advertisement
ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಗುರುವಾರದಂದು ಮೈಸೂರಿನಲ್ಲಿ ಪೆಟ್ರೋಲ್ ಬಂಕ್ ಮಾಲೀಕರು ಮೈಸೂರು ವಿಭಾಗದ ಪೆಟ್ರೋಲ್ ಬಂಕ್ ಬಂದ್‍ಗೆ ನೀಡಿದ್ದ ಕರೆಗೆ ಮಂಡ್ಯದಲ್ಲಿ ಉತ್ತಮವಾಗಿಯೇ ಬೆಂಬಲ ವ್ಯಕ್ತವಾಗಿದೆ. ಆದ್ರೆ ಬೆಳ್ಳಂಬೆಳಗ್ಗೆ ತಮ್ಮ ವಾಹನಗಳಿಗೆ ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದ ಬೈಕ್ ಹಾಗೂ ಖಾಸಗಿ ವಾಹನ ಸವಾರರುಗಳು ಕಂಗಾಲಾಗಿದ್ದಾರೆ. ಗುರುವಾರ ಮಧ್ಯರಾತ್ರಿಯೆಂದಲೇ ಪೆಟ್ರೋಲ್ ಬಂಕ್‍ಗಳು ಬಂದಾಗಿವೆ. ಇಂದು ಮಧ್ಯರಾತ್ರಿ 12 ಗಂಟೆವರೆಗೆ ಪೆಟ್ರೋಲ್ ಬಂಕ್ ಬಾಗಿಲು ಮುಚ್ಚಲಿವೆ.
Advertisement