ನವದೆಹಲಿ: ಕಳೆದ 14 ದಿನದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಸೋಮವಾರವೂ ಸಹ ಪ್ರತಿ ಲೀಟರ್ ಪೆಟ್ರೋಲ್‍ಗೆ 42 ಪೈಸೆ, ಡಿಸೇಲ್‍ಗೆ 39 ಪೈಸೆ ಏರಿಕೆಯಾಗಿದೆ.
Advertisement
ಭಾನುವಾರ ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 109.01 ರೂ., ಡಿಸೇಲ್‍ಗೆ 92.85 ರೂ. ಇತ್ತು. ಈಗ ಲೀಟರ್ ಪೆಟ್ರೋಲ್ ಬೆಲೆ 109.43 ರೂ., ಡಿಸೇಲ್ 93.24 ರೂ.ಗೆ ಏರಿಕೆಯಾಗಿದೆ. ಕಳೆದ ಎರಡು ವಾರಗಳಿಂದ ಇಂಧನದ ತೈಲ ಬೆಲೆಯಲ್ಲಿ ಒಟ್ಟು 8.40 ರೂ. ದರ ಏರಿಕೆಯಾಗಿದೆ. ಇದನ್ನೂ ಓದಿ: 13ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
Advertisement
Advertisement
ಯಾವ ನಗರದಲ್ಲಿ ಎಷ್ಟು?
ದೆಹಲಿಯಲ್ಲಿ ಪ್ರತಿ ಲೀ. ಪೆಟ್ರೋಲ್ ಬೆಲೆ 103.41 ರೂ. ಡೀಸೆಲ್ ಬೆಲೆ ರೂ.94.67 ರೂ. ಏರಿಕೆಯಾಗಿದೆ. ಮುಂಬೈನಲ್ಲಿ ಲೀ. ಪೆಟ್ರೋಲ್ ದರ 118.41 ರೂ. ಡೀಸೆಲ್ 102.64 ರೂ. ದಾಖಲಾಗಿದೆ. ಚೆನ್ನೈನಲ್ಲಿ ಲೀ. ಪೆಟ್ರೋಲ್ ದರ 108.21 ರೂ. ಹಾಗೂ ಡೀಸೆಲ್ ದರ 99.04 ರೂ. ಇದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ, ರಾಜ್ಯಗಳ ವ್ಯಾಟ್ ತೆರಿಗೆ ಸೇರಿದ ಬಳಿಕ ಬೆಲೆ ಏರಿಕೆಯಾಗುತ್ತದೆ.