Connect with us

Latest

ವಿಡಿಯೋ: ಪೆಟ್ರೋಲ್‍ಗೆ ಅಡಿಕ್ಟ್ ಆಗಿ ಬೈಕ್‍ಗಳಿಂದ ಪೆಟ್ರೋಲ್ ಕದ್ದ ಕೋತಿ!

Published

on

ಪಾಣಿಪತ್: ಪೆಟ್ರೋಲ್ ಕುಡಿಯುವುದಕ್ಕೆ ಅಡಿಕ್ಟ್ ಆಗಿದ್ದ ಕೋತಿಯೊಂದು ಬೈಕ್‍ಗಳಿಂದ ಪೆಟ್ರೋಲ್ ಕಳ್ಳತನ ಮಾಡಿ ಸಿಕ್ಕಿಬಿದ್ದಿದೆ. ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು, ನೋಡುಗರ ಹುಬ್ಬೇರಿಸಿದೆ.

ಹರಿಯಾಣದ ಪಾಣಿಪತ್‍ನಲ್ಲಿ ಇದ್ದಕ್ಕಿದ್ದಂತೆ ಬೈಕ್‍ಗಳಿಂದ ಪೆಟ್ರೋಲ್ ಖಾಲಿಯಾಗ್ತಿದ್ದನ್ನು ಕಂಡು ಇಲ್ಲಿನ ಬೈಕ್ ಮಾಲೀಕರು ಗಾಬರಿಯಾಗಿದ್ರು. ಪೆಟ್ರೋಲ್ ಕಳ್ಳತನ ಮಾಡ್ತಿರೋದು ಯಾರು ಅನ್ನೋದನ್ನ ಪತ್ತೆ ಮಾಡಲು ಕ್ಯಾಮೆರಾ ಅಳವಡಿಸಿದ್ದರು. ಆಗ ನಿಜವಾದ ಕಳ್ಳ ಯಾರು ಅನ್ನೋದು ಬಯಲಾಗಿದೆ. ಕೋತಿಯೊಂದು ಪೈಪ್ ಮೂಲಕ ಪೆಟ್ರೋಲ್ ಎಳೆದುಕೊಂಡು ಪೆಟ್ರೋಲ್ ಟ್ಯಾಂಕ್ ಖಾಲಿಯಾಗಿಸುತ್ತಿದ್ದುದನ್ನ ಕಂಡ ಬೈಕ್ ಮಾಲೀಕರು ದಂಗಾಗಿದ್ದಾರೆ.

ಸಾಕಷ್ಟು ಪೆಟ್ರೋಲ್ ಕುಡಿಯುತ್ತಿದ್ದರಿಂದ ಈ ಕೋತಿ ಯಾವಾಗ್ಲೂ ನಶೆಯಲ್ಲಿ ಇರುತ್ತಿದ್ದು, ಬಾಳೆಹಣ್ಣು ಕೊಟ್ಟರೂ ನಿರಾಕರಿಸುತ್ತಿತ್ತು ಎಂದು ವರದಿಯಾಗಿದೆ. ಇಲ್ಲಿನ ಕಾರ್ ಪಾರ್ಕ್‍ನಿಂದ ಸ್ಥಳೀಯರು ನಿರಂತರವಾಗಿ ಇದನ್ನ ಓಡಿಸುತ್ತಿದ್ದರಿಂದ ಈ ಪೆಟ್ರೋಲ್ ವ್ಯಸನದಿಂದ ಹೊರಬಂದಿದೆಯಂತೆ.

ವರದಿಯ ಪ್ರಕಾರ ಈ ಕೋತಿ ಸುತ್ತಮುತ್ತ ಯಾರೂ ಇಲ್ಲದ ಸಮಯ ನೋಡಿ ಬೈಕ್‍ಗಳ ಫ್ಯೂಲ್ ಪೈಪ್‍ನಿಂದ ಪೆಟ್ರೋಲ್ ಕುಡಿಯುತ್ತಿತ್ತು.

ನಗರದಲ್ಲಿ ಸ್ವಯಂಸೇವಕ ಸಂಸ್ಥೆಯೊಂದನ್ನ ನಡೆಸುತ್ತಿರುವ ಗೌರವ್ ಲೇಖಾ ಈ ಬಗ್ಗೆ ಪ್ರತಿಕ್ರಿಯಿಸಿ, ಈ ಕೋತಿ ನಿಜಕ್ಕೂ ಪೆಟ್ರೋಲ್‍ಗೆ ಅಡಿಕ್ಟ್ ಆಗಿತ್ತು. ಯಾರಾದ್ರೂ ಕಡಲೆಕಾಯಿ ಅಥವಾ ಬಾಳೇಹಣ್ಣು ಕೊಟ್ಟರೂ ತೆಗೆದುಕೊಳ್ತಿರಲಿಲ್ಲ. ಯಾವಾಗ್ಲೂ ನಶೆಯಲ್ಲಿ ಇರುತ್ತಿದ್ದರಿಂದ ಈ ಕೋತಿ ಯಾರಿಗೂ ಅಪಾಯ ಮಾಡ್ತಿರಲಿಲ್ಲ ಎಂದು ಹೇಳಿದ್ದಾರೆ.

 

Click to comment

Leave a Reply

Your email address will not be published. Required fields are marked *