ವಾಷಿಂಗ್ಟನ್: ಆಸ್ಕರ್ ಪ್ರಶಸ್ತಿ ಪುರಸ್ಕೃತ, ಖ್ಯಾತ ಹಾಲಿವುಡ್ ನಿರ್ದೇಶಕ ಪೀಟರ್ ಬಾಗ್ಡಾನವಿಚ್ ನಿಧನವಾಗಿದ್ದಾರೆ. ಹಾಲಿವುಡ್ ಮಂದಿ ಕಂಬನಿ ಮಿಡಿದಿದ್ದಾರೆ.
ಪೀಟರ್ ಬಾಗ್ಡಾನವಿಚ್( 82) ಅವರು ಗುರುವಾರ (ಜ.6) ಇಹಲೋಕ ತ್ಯಜಿಸಿದ್ದಾರೆ. ಹಲವಾರು ಜನಪ್ರಿಯ ಹಾಲಿವುಡ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಪೀಟರ್ ಬಾಗ್ಡಾನವಿಚ್ ಅವರು ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದರು. ಅನೇಕ ನಿರ್ದೇಶಕರಿಗೆ ಅವರು ಸ್ಫೂರ್ತಿ ಆಗಿದ್ದರು. ಸಿನಿಮಾ ನಿರ್ದೇಶಕ ಆಗುವುದಕ್ಕೂ ಮುನ್ನ ಅವರು ವಿಮರ್ಶಕನಾಗಿ ಫೇಮಸ್ ಆಗಿದ್ದರು.
Advertisement
Advertisement
ನಟನಾಗಿಯೂ ಪೀಟರ್ ಬಾಗ್ಡಾನವಿಚ್ ಫೇಮಸ್ ಆಗಿದ್ದರು. ಅನೇಕ ಸಾಕ್ಷ್ಯಚಿತ್ರಗಳನ್ನೂ ಅವರು ನಿರ್ದೇಶಿಸಿದ್ದರು. ಸಿನಿಮಾ ಸಂಬಂಧಿತ ಹಲವು ಕೃತಿಗಳನ್ನು ಕೂಡ ಅವರ ರಚಿಸಿದ್ದರು. ಇದನ್ನೂ ಓದಿ: ನನ್ನ ಹೆಸರು Kovid, ಆದ್ರೆ ನಾನು ವೈರಸ್ ಅಲ್ಲ: ಬೆಂಗಳೂರು ಉದ್ಯಮಿ
Advertisement
Peter always made me laugh! He’ll keep making them laugh up there too. May he rest in peace. #PeterBogdanovich pic.twitter.com/FIl0Hf6pif
— Barbra Streisand (@BarbraStreisand) January 6, 2022
Advertisement
ಪ್ರಶಸ್ತಿಗಳು: ಗೋಲ್ಡನ್ ಗ್ಲೋಬ್, ಆಸ್ಕರ್, ಗ್ರ್ಯಾಮಿ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಅವರು ಪಡೆದುಕೊಂಡಿದ್ದರು. 1968ರಲ್ಲಿ ಅವರು ನಿರ್ದೇಶಕನಾಗಿ ಕೆಲಸ ಆರಂಭಿಸಿದರು. 1971ರಲ್ಲಿ ಅವರು ನಿರ್ದೇಶಿಸಿದ ದಿ ಲಾಸ್ಟ್ ಪಿಕ್ಚರ್ ಶೋ ಸಿನಿಮಾ ಸೂಪರ್ ಹಿಟ್ ಆಗಿತ್ತು. 8 ವಿಭಾಗಳಲ್ಲಿ ಆಸ್ಕರ್ ಪ್ರಶಸ್ತಿಗೆ ಆ ಚಿತ್ರ ನಾಮಿನೇಟ್ ಆಗಿತ್ತು. ಇದನ್ನೂ ಓದಿ: ವಯೋಮಿತಿ ಏರಿಕೆ ಭೀತಿ- ಮುಸ್ಲಿಮರು ತರಾತುರಿ ಲಗ್ನ
ಸಿನಿಮಾಗಳು: ದಿ ಲಾಸ್ಟ್ ಪಿಕ್ಚರ್ ಶೋ, ವಾಟ್ಸಪ್ ಡಾಕ್, ಪೇಪರ್ ಮೂನ್, ಸೇಂಟ್ ಜಾಕ್, ದೇ ಆಲ್ ಲಾಫ್ಡ್, ಮಾಸ್ಕ್ ಹೀಗೆ ಮುಂತಾದ ಸಿನಿಮಾಗಳಾಗಿವೆ. ಇದನ್ನೂ ಓದಿ: ಗರ್ಭಿಣಿ ಅಂತಾ ಸುಳ್ಳಿ ಹೇಳಿ ಮಗುವಿಗೆ ಜನ್ಮ ಕೊಟ್ಟಳು- ಆದರೆ ಕಂದಮ್ಮ ಇಲ್ಲ