Connect with us

Bollywood

ಪ್ರಿಯಾಂಕ-ನಿಕ್ ಮದ್ವೆಗೆ ಪೇಟಾ ಆಕ್ರೋಶ

Published

on

ನವದೆಹಲಿ: ಬಾಲಿವುಡ್ ಹಾಗೂ ಹಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈಗ ಅವರ ವಿರುದ್ಧ ಪೇಟಾ(ಪೀಪಲ್ ಫಾರ್ ಎಥಿಕಲ್ ಟ್ರೀಟ್‍ಮೆಂಟ್ ಆಫ್ ಎನಿಮಲ್ಸ್) ಸಂಸ್ಥೆ ಆಕ್ರೋಶ ವ್ಯಕ್ತಪಡಿಸಿದೆ.

ಪ್ರಿಯಾಂಕ ತನ್ನ ಗೆಳೆಯ ನಿಕ್ ಜೋನಸ್ ಜೊತೆ ಡಿ.1 ಹಾಗೂ 2ರಂದು ಕ್ರೈಸ್ತ ಹಾಗೂ ಹಿಂದೂ ಸಂಪ್ರದಾಯದ ಪ್ರಕಾರ ಜೋಧ್‍ಪುರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಪ್ರಿಯಾಂಕ ಹಾಗೂ ನಿಕ್ ತಮ್ಮ ಮದುವೆಗೆ ಆನೆ ಹಾಗೂ ಕುದುರೆಯನ್ನು ಮೆರವಣಿಗೆಯಲ್ಲಿ ಬಳಸಿದಕ್ಕೆ ಪೇಟಾ ಆಕ್ರೋಶ ವ್ಯಕ್ತಪಡಿಸಿದೆ.

ಪೇಟಾ ತನ್ನ ಟ್ವಿಟ್ಟರ್ ಖಾತೆಯಲ್ಲಿ, “ಪ್ರೀತಿಯ ಪ್ರಿಯಾಂಕ ಹಾಗೂ ನಿಕ್. ಮದುವೆಗಾಗಿ ಆನೆಗಳನ್ನು ಹಾಗೂ ಕುದುರೆ ಬಳಸುವುದು ಸರಿಯಲ್ಲ. ಏಕೆಂದರೆ ಪ್ರಾಣಿಗಳನ್ನು ಚಾಟಿಯಿಂದ ನಿಯಂತ್ರಿಸಬೇಕಾಗುತ್ತದೆ. ನಿಮ್ಮ ಮದುವೆಗೆ ನಮ್ಮ ಕಡೆಯಿಂದ ಶುಭಾಶಯಗಳು. ಆದರೆ ಈ ದಿನ ಪ್ರಾಣಿಗಳನ್ನು ಬಳಕೆ ಮಾಡಿದ್ದು ಸರಿಯಿಲ್ಲ” ಎಂದು ಟ್ವೀಟ್ ಮಾಡಿದೆ.

ಪೇಟಾ ಅವರ ಈ ಟ್ವೀಟ್‍ಗೆ ಅಭಿಮಾನಿಯೊಬ್ಬರು ಪ್ರಿಯಾಂಕ ತಮ್ಮ ಮದುವೆಯ ಫೋಟೋವನ್ನು ಹಂಚಿಕೊಂಡಿಲ್ಲ. ಈ ಮೊದಲೇ ನೀವು ಈ ರೀತಿ ಹೇಳುವುದು ಸರಿಯಲ್ಲ ಎಂದು ರೀ-ಟ್ವೀಟ್ ಮಾಡಿದರೆ, ಮತ್ತೊಬ್ಬರು ಭಾರತದಲ್ಲಿ 80% ಜನರು ಮದುವೆ ಮೆರವಣಿಗೆಯಲ್ಲಿ ಕುದುರೆ ಬಳಸುತ್ತಾರೆ ಎಂದು ರೀ-ಟ್ವೀಟ್ ಮಾಡಿದ್ದಾರೆ.

ಡಿ. 1ರಂದು ಹಾಗೂ 2ರಂದು ಹಿಂದೂ ಹಾಗೂ ಕ್ರೈಸ್ತ ಸಂಪ್ರದಾಯದಲ್ಲಿ ಮದುವೆಯಾದ ಬಳಿಕ ಪ್ರಿಯಾಂಕ ತಮ್ಮ ಮದುವೆಯ ಫೋಟೋಗಳನ್ನು ಮೊದಲ ಬಾರಿಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಂಗಳವಾರ ನವದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್‍ನಲ್ಲಿ ಪ್ರಿಯಾಂಕ ಹಾಗೂ ನಿಕ್ ಆರತಕ್ಷತೆ ನಡೆದಿದೆ.

ಆರತಕ್ಷತೆಯಲ್ಲಿ ಪ್ರಿಯಾಂಕ ಸಿಲ್ವರ್ ಬಣ್ಣದ ಲೆಹೆಂಗಾ ಧರಿಸಿದ್ದರೆ, ನಿಕ್ ಕಪ್ಪು ಬಣ್ಣದ ಉಡುಪನ್ನು ಧರಿಸಿ ಮಿಂಚಿದ್ದಾರೆ. ಇವರಿಬ್ಬರ ಆರತಕ್ಷತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸಿ ನವಜೋಡಿಯನ್ನು ಶುಭ ಕೋರಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *