ಪಾಟ್ನಾ: ಬಿಹಾರದ ಗಯಾ ಜಿಲ್ಲೆಯ ಕುಟುಂಬವೊಂದು ಕಳೆದ 12 ವರ್ಷಗಳಿಂದಲೂ ಮುದ್ದಾಗಿ ಸಾಕಿದ್ದ `ಪೊಪೊ’ ಗಿಳಿಯೊಂದು ಕಾಣೆಯಾಗಿದ್ದು, ಹುಡುಕಿಕೊಟ್ಟವರಿಗೆ ಆಕರ್ಷಕ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ.
ಇಲ್ಲಿನ ಪಿಪಾರಪತಿ ರಸ್ತೆಯ ನಿವಾಸಿಗಳಾದ ಶ್ಯಾಮ್ ದೇವ್ ಪ್ರಸಾದ್‌ಗುಪ್ತಾ ಹಾಗೂ ಅವರ ಪತ್ನಿ ಸಂಗೀತಾ ಗುಪ್ತಾ ತಮ್ಮ ಗಿಳಿಯನ್ನು ಹುಡುಕಿಕೊಟ್ಟವರಿಗೆ 5,100 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ನಗರದ ಪ್ರಮುಖ ರಸ್ತೆಯ ಗೋಡೆಗಳ ಮೇಲೆ ಹಾಗೂ ಮಾರುಕಟ್ಟೆಗಳಲ್ಲಿ ಪಕ್ಷಿಯ ಫೋಟೋ ಇರುವ ಪೋಸ್ಟರ್‌ಗಳನ್ನು ಹಾಕಲಾಗಿದೆ. ಇದನ್ನೂ ಓದಿ: ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಬ್ರಿಟಿಷ್ ಮಹಿಳೆಗೆ ಮುಂಬೈ ಕ್ಲಬ್‌ನಲ್ಲಿ ಕಿರುಕುಳ
Advertisement
Advertisement
ಪೊಪೊ ಗಿಳಿ ಒಂದು ತಿಂಗಳ ಹಿಂದೆ ಮನೆಯಿಂದ ಹಾರಿಹೋಗಿದೆ. ಅದನ್ನು ಮರಳಿ ಪಡೆಯಲು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ವಿಶೇಷ ಧ್ವನಿಯಲ್ಲಿ ಕೂಗುವುದು, ಹತ್ತಿರದ ಮರಗಳಲ್ಲಿ ಹುಡುಕುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.
Advertisement
ಕೊನೆಯ ಪ್ರಯತ್ನವಾಗಿ ಪೋಸ್ಟರ್ ಮೂಲಕ ಕರೆ ಕೊಟ್ಟಿದ್ದಾರೆ. ಜೊತೆಗೆ ಫೇಸ್‌ಬುಕ್ ಹಾಗೂ ವಾಟ್ಸಾಪ್ ಮೂಲಕ ಸಂದೇಶ ರವಾನೆ ಮಾಡುವ ಮೂಲಕ ಹುಡುಕಾಟದ ಅಭಿಯಾನ ಶುರು ಮಾಡಿದ್ದಾರೆ. ಇದನ್ನೂ ಓದಿ: ಭಾವಿಪತಿಯನ್ನೇ ಅರೆಸ್ಟ್ ಮಾಡಿದ ಇನ್ಸ್‌ಪೆಕ್ಟರ್
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಗೀತಾ ಗುಪ್ತ ಅವರು, ಸುಮಾರು 12 ವರ್ಷಗಳಿಂದ ಗಿಳಿಯನ್ನು ಸಾಕುಪ್ರಾಣಿಯನ್ನು ಹೊಂದಿದ್ದೆವು. ಏಪ್ರಿಲ್ 5ರಂದು ಪಕ್ಷಿ ಮನೆಯಿಂದ ನಾಪತ್ತೆಯಾಗಿತ್ತು. ನಮ್ಮ ಪಕ್ಷಿಯನ್ನು ಯಾರೇ ತೆಗೆದುಕೊಂಡಿದ್ದರೂ ದಯವಿಟ್ಟು ಅದನ್ನು ನಮಗೆ ಹಿಂತಿರುಗಿಸಿ ಎಂದು ಮನವಿ ಮಾಡಿದ್ದೇವೆ. ಏಕೆಂದರೆ ಅದು ಪಕ್ಷಿ ಮಾತ್ರವಲ್ಲ ನಮ್ಮ ಕುಟುಂಬದ ಸದಸ್ಯ. ಅದಕ್ಕೆ ಪ್ರೀತಿಯಿಂದ ಪೊಪೊ ಎಂದು ಹೆಸರಿಡಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.