-ಒಡೆಯನ ನಿರೀಕ್ಷೆಯಲ್ಲಿದೆ ಸಾಕು ನಾಯಿ
ಮಡಿಕೇರಿ: ಪ್ರವಾಹ ನಿಂತ ಮೇಲೆ ಜಿಲ್ಲೆಯಲ್ಲಿ ದಿನಕ್ಕೊಂದು ಮನಕಲಕುವ ಘಟನೆಗಳು ವರದಿಯಾಗುತ್ತಿದ್ದು, ಹಟ್ಟಿಹೊಳೆ ಗ್ರಾಮದಲ್ಲಿ ಸಾಕುನಾಯಿಯೊಂದು ಕುಸಿದ ಮನೆಯ ಬಳಿಯೇ ಕಳೆದ ನಾಲ್ಕು ದಿನಗಳಿಂದ ಮಾಲೀಕನ ಬರುವಿಕೆಗಾಗಿ ಅನ್ನ-ಆಹಾರವಿಲ್ಲದೆ ಜಾಥಕ ಪಕ್ಷಿಯಂತೆ ಕಾಯುತ್ತಿದೆ.
ಪ್ರವಾಹದಿಂದ ತಾಲೂಕಿನ ಹಟ್ಟಿಹೊಳೆ ಗ್ರಾಮವು ಸಂಪೂರ್ಣ ನಾಶವಾಗಿ ಹೋಗಿದ್ದು, ಗ್ರಾಮದ ಬಹುತೇಕ ಜನರು ನಿರಾಶ್ರಿತರಾಗಿ ಪರಿಹಾರ ಕೇಂದ್ರಗಳಲ್ಲಿ ಬೀಡು ಬಿಟ್ಟಿದ್ದಾರೆ. ಆದರೆ ಹಟ್ಟಿಹೊಳೆಯಲ್ಲಿ ಸಂಭವಿಸಿದ ಪ್ರವಾಹಕ್ಕೆ ಸಿಲುಕಿ ಕುಸಿದು ಬಿದ್ದಿರುವ ಮನೆಯ ಬಳಿಯೇ ಸಾಕು ನಾಯಿಯೊಂದು ಗೋಳಾಡುತ್ತಿರುವ ದೃಶ್ಯ ಮನಕಲಕುವಂತಿದೆ. ಇದನ್ನೂ ಓದಿ: ಕಣ್ಣಮುಂದೆಯೇ ವ್ಯಕ್ತಿ ಭೂ ಸಮಾಧಿ- ಬಟ್ಟೆ ಒಣಹಾಕುವಾಗ ಭೂಕುಸಿತವಾಗಿ ನಾಪತ್ತೆ
Advertisement
Advertisement
ಸುಮಾರು 4 ದಿನಗಳಿಂದಲೂ ನಾಯಿಯು ಅನ್ನ-ಆಹಾರವಿಲ್ಲದೆ ಕುಸಿದ ಮನೆಯನ್ನೇ ಕಾವಲು ಕಾಯುತ್ತಿದ್ದು, ನನ್ನ ಒಡೆಯ ಈಗ ಬರುತ್ತಾನೆ, ಆಗ ಬರುತ್ತಾನೆ ಎನ್ನುವ ನಿರೀಕ್ಷೆಯಲ್ಲಿ ದಿನ ಕಳೆಯುತ್ತಿದೆ. ಅನ್ನ-ಆಹಾರ ವಿಲ್ಲದೇ ಬಳಲಿದ್ದರೂ, ತನ್ನ ನಿಯತ್ತನ್ನು ಬಿಡದೇ ಒಡೆಯನ ಕುಸಿದು ಬಿದ್ದಿರುವ ಮನೆಯ ಹತ್ತಿರ ಯಾರನ್ನು ಸುಳಿಯಲು ಬಿಡದೆ ಕಾವಲು ಕಾಯುತ್ತಿದೆ. ಇದನ್ನೂ ಓದಿ: ಭಾರೀ ಶಬ್ಧದಿಂದ ಹೆದರಿ ಬಾಣಂತಿ, 2 ತಿಂಗ್ಳ ಮಗುವನ್ನು ಎತ್ತಿಕೊಂಡು ಓಡಿದ್ವಿ- ಜೋಡುಪಾಲದ ಮಹಿಳೆ ಕಣ್ಣೀರು
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv