ನವದೆಹಲಿ: ಮದುವೆಯ ವೇಳೆ ಮಾಲಕಿಯ ಜೊತೆ ಸಾಕುನಾಯಿಯೊಂದು ಸಪ್ತಪದಿ ತುಳಿಯುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.
ದೆಹಲಿಯಲ್ಲಿ ಕೆಲ ದಿನಗಳ ಹಿಂದೆ ಮದುವೆ ನಡೆದಿತ್ತು. ಒಡತಿ ಮಾನಸಿಗೆ ಮದುವೆ ವೇಳೆಯೂ ತಾನು ಸಾಕಿದ್ದ ಸಾಕುನಾಯಿ ಸುಲ್ತಾನ್ ತನ್ನ ಜೊತೆ ಇರಬೇಕೆಂದು ಬಯಸಿದ್ದರು. ಅದರಂತೆ ಮದುವೆ ವೇಳೆ ಸುಲ್ತಾನ್ ವಿಶೇಷ ಬಟ್ಟೆಗಳಿಂದ ಶೃಂಗರಿಸಿದ್ದರು.
- Advertisement
- Advertisement
ಬಂದತಹ ಅತಿಥಿಗಳನ್ನು ಸ್ವಾಗತಿಸುತ್ತಿದ್ದ ಈ ಸುಲ್ತಾನ್ ಮದುವೆ ವೇಳೆ ಮಂಟಪವನ್ನು ಏರಿದ್ದ. ಅಷ್ಟೇ ಅಲ್ಲದೇ ಸಪ್ತಪದಿ ತುಳಿಯು ವೇಳೆ ಈ ಸುಲ್ತಾನ್ ವಧು- ವರರನ್ನು ಹಿಂಬಾಲಿಸಿದೆ. ನಾಯಿ ಇವರ ಸುತ್ತುವುದನ್ನು ನೋಡಿ ಅತಿಥಿಗಳು ಆಶ್ಚರ್ಯಗೊಂಡು ನಕ್ಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಇದೂವರೆಗೂ 3.73 ಲಕ್ಷ ವ್ಯೂ ಕಂಡಿದ್ದು, 1600ಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.