ನವದೆಹಲಿ: ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರೊಬ್ಬರು (Judge) ತಮ್ಮ ಮನೆಯ ಮುದ್ದಿನ ನಾಯಿ (Pet Dog) ನಾಪತ್ತೆಯಾಗಿರುವುದಕ್ಕೆ ತಮ್ಮ ಭದ್ರತಾ ಸಿಬ್ಬಂದಿಯನ್ನು (Security Personnel) ಅಮಾನತು ಮಾಡುವಂತೆ ಕೋರಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದಿರುವ ಘಟನೆ ನಡೆದಿದೆ.
ಪ್ರಸ್ತುತ ಕೋಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶರಾಗಿರುವ ಗೌರವ್ ಕಾಂತ್ ದೆಹಲಿ ಹೈಕೋರ್ಟ್‌ನಲ್ಲಿ (Delhi High Court) ನ್ಯಾಯಾಧೀಶರಾಗಿದ್ದಾಗ ಜೂನ್ 12ರಂದು ಜಂಟಿ ಪೊಲೀಸ್ ಕಮಿಷನರ್ ಮಂಗೇಶ್ ಕಶ್ಯಪ್ ಅವರಿಗೆ ಪತ್ರ ಬರೆದು, ತಮ್ಮ ಭದ್ರತಾ ಸಿಬ್ಬಂದಿಯಿಂದ ತಮ್ಮ ನಾಯಿ ನಾಪತ್ತೆಯಾಗಿದೆ. ತಮ್ಮ ಭದ್ರತಾ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು ಹಾಗೂ ಈ ಬಗ್ಗೆ ತನಿಖೆ ನಡೆಸಬೇಕು ಎಂದು ತಿಳಿಸಿದ್ದಾರೆ.
Advertisement
Advertisement
ಪತ್ರದಲ್ಲೇನಿದೆ?
ನನ್ನ ಅಧಿಕೃತ ನಿವಾಸದಲ್ಲಿ ಭದ್ರತೆಯನ್ನು ಒದಗಿಸುವ ಅಧಿಕಾರಿಗಳ ನಿಷ್ಠೆಯ ಕೊರತೆಯಿಂದಾಗಿ ನನ್ನ ಸಾಕು ನಾಯಿಯನ್ನು ಕಳೆದುಕೊಂಡಿದ್ದೇನೆ. ಬಾಗಿಲನ್ನು ಲಾಕ್ ಮಾಡಿ ಎಂದು ಪದೇ ಪದೇ ಹೇಳುತ್ತಿದ್ದರೂ ನನ್ನ ನಿವಾಸದಲ್ಲಿ ನಿಯೋಜಿಸಲಾದ ಭದ್ರತಾ ಅಧಿಕಾರಿಗಳು ನನ್ನ ನಿರ್ದೇಶನವನ್ನು ಅನುಸರಿಸುವಲ್ಲಿ ಹಾಗೂ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ. ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಲು ಯುವಕರ ಹುಚ್ಚಾಟ – ಪೊಲೀಸರಿಂದ ತಕ್ಕ ಪಾಠ
Advertisement
ಇಂತಹ ಲೋಪ ಹಾಗೂ ಅಸಮರ್ಥತೆಗೆ ತಕ್ಷಣವೇ ಕ್ರಮ ವಹಿಸಬೇಕು. ಏಕೆಂದರೆ ಇದು ನನ್ನ ಜೀವನ ಹಾಗೂ ಸ್ವಾತಂತ್ರ್ಯಕ್ಕೆ ಗಂಭೀರ ಅಪಾಯ ಉಂಟುಮಾಡಬಹುದು ಎಂದು ಗೌರವ್ ಕಾಂತ್ ಭೀತಿ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ಪತ್ರದ ದಿನಾಂಕದಿಂದ 3 ಕೆಲಸದ ದಿನಗಳೊಳಗೆ ಸಮಸ್ಯೆ ಬಗ್ಗೆ ಕ್ರಮ ಕೈಗೊಂಡು ವರದಿಯನ್ನು ಸಲ್ಲಿಸಬೇಕು ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
Advertisement
ಗೌರವ್ ಕಾಂತ್ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದ ಕೆಲವೇ ದಿನಗಳಲ್ಲಿ ಶುಕ್ರವಾರ ಕೋಲ್ಕತ್ತಾ ಹೈಕೋರ್ಟ್‌ಗೆ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಿಯಕರನ ಭೇಟಿಯಾಗಲು ಗ್ರಾಮದ ವಿದ್ಯುತ್ ಅನ್ನೇ ಕಡಿತಗೊಳಿಸ್ತಿದ್ದ ಯುವತಿ
Web Stories