ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ವಾಕಿಂಗ್‌ಗಾಗಿ ಸಾಕು ನಾಯಿಗಳನ್ನು ತರಲು ಜುಲೈ 1 ರಿಂದ ನಿಷೇಧಿಸಲಾಗಿದೆ. ಸಾಕು ನಾಯಿ ಮಾಲೀಕರು ಯಾವುದೇ ಕಾರಣಕ್ಕೂ ನಾಯಿಗಳನ್ನು ತಮ್ಮೊಂದಿಗೆ ತರುವಂತಿಲ್ಲ ಎಂದು ಕಟ್ಟಪ್ಪಣೆ ಹೊರಡಿಸಿದೆ. ಹೀಗಾಗಿ ತೋಟಗಾರಿಕೆ ಇಲಾಖೆಯ ನಡೆಗೆ ಐಂದ್ರಿತಾ ರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಬ್ಬನ್ ಪಾರ್ಕ್ ಶುಚಿಯ ದೃಷ್ಟಿಯಿಂದ ನೀವು ಈ ಕ್ರಮವನ್ನು ತಗೆದುಕೊಂಡಿದ್ದೀರಿ ನಿಜ. ಆದರೆ ಆ ಎಚ್ಚರಿಕೆಯನ್ನು ನಾಯಿ ಮಾಲೀಕರೂ ತಗೆದುಕೊಳ್ಳುತ್ತೇವೆ. ಹಾಗಾಗಿ ನಿರ್ಣಯವನ್ನು ಮರುಪರಿಶೀಲಿಸಿ ಎಂದು ಟ್ವೀಟ್ ಮಾಡಿದ್ದಾರೆ.
Advertisement
“ಸಾಕು ನಾಯಿಗಳು ಕಬ್ಬನ್ ಪಾರ್ಕ್ ಅನ್ನು ಹೊಲಸು ಮಾಡುತ್ತವೆ ಎನ್ನುವ ಕಾರಣಕ್ಕಾಗಿ ಬ್ಯಾನ್ ಮಾಡುವ ಆದೇಶವನ್ನು ನೀಡಿದ್ದೀರಿ. ಪ್ರಜ್ಞಾವಂತ ನಾಗರಿಕರು ಯಾವತ್ತೂ ಕಬ್ಬನ್ ಪಾರ್ಕ್ ಅನ್ನು ಹಾಳು ಮಾಡುವುದಕ್ಕೆ ಬಿಡುವುದಿಲ್ಲ. ಅವರಿಗೂ ಕಬ್ಬನ್ ಪಾರ್ಕ್ ಅನ್ನು ಶುಚಿಯಾಗಿಡುವ ಮನಸ್ಸಿದೆ. ನಾಯಿಗಳನ್ನು ಬ್ಯಾನ್ ಮಾಡುವ ಮೂಲಕ ಅವುಗಳ ಹಕ್ಕುಗಳನ್ನು ಕಸಿದುಕೊಳ್ಳಬೇಡಿ. ಆದೇಶವನ್ನು ಮರುಪರಿಶೀಲಿಸಲು ವಿನಂತಿ’ ಎಂದು ಐಂದ್ರಿತಾ ರೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಓದಿ:ರಶ್ಮಿಕಾ ಮಂದಣ್ಣ ಸಂಭಾವನೆ 5 ಕೋಟಿನಾ? : ನಂ.1 ಸ್ಥಾನಕ್ಕೆ ಏರಿದ ಕೊಡಗಿನ ಬೆಡಗಿ
Advertisement
Advertisement
ಸಾಕು ನಾಯಿ ಮತ್ತು ಬೀದಿ ನಾಯಿಗಳ ಕುರಿತು ಐಂದ್ರಿತಾ ರೇ ಸಾಕಷ್ಟು ಕಾಳಜಿವಹಿಸುತ್ತಾರೆ. ಅನೇಕ ಬಾರಿ ನಾಯಿಗಳಿಗೆ ತೊಂದರೆಯಾದಾಗ, ಅವುಗಳನ್ನು ಕಾಪಾಡುವ ನಿಟ್ಟಿನಲ್ಲಿ ಹೋರಾಟವನ್ನೂ ಮಾಡಿದ್ದಾರೆ. ಪ್ರಾಣಿಗಳ ರಕ್ಷಣೆಗೆ ಪತಿ ದಿಗಂತ್ ಜೊತೆಯೂ ಕೈ ಜೋಡಿಸಿದ್ದಾರೆ. ಸ್ವತಃ ಅನೇಕ ತಳಿಯ ನಾಯಿಗಳನ್ನೂ ಅವರು ಸಾಕಿದ್ದಾರೆ. ಹೀಗಾಗಿ ನಾಯಿ ಪ್ರಿಯರ ಪರವಾಗಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಅವರು ಮನವಿ ಮಾಡಿಕೊಂಡಿದ್ದಾರೆ.