ಇಸ್ಲಾಮಾಬಾದ್: ಸೋಮವಾರ ಪಾಕಿಸ್ತಾನದ (Pakistan) ಪೇಶಾವರದಲ್ಲಿ (Peshawar) ಮಸೀದಿಯೊಳಗೆ (Mosque) ನಡೆದ ಆತ್ಮಾಹುತಿ ದಾಳಿಗೆ (Suicide Attack) ಇಲ್ಲಿಯವರೆಗೆ 89 ಜನರು ಮೃತಪಟ್ಟಿದ್ದಾರೆ ಹಾಗೂ 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸೋಮವಾರ ಮಧ್ಯಾಹ್ನ ಪೇಶಾವರದ ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಆತ್ಮಾಹುತಿ ದಾಳಿ ನಡೆದಿತ್ತು. ಇದರಿಂದ ಮಸೀದಿ ಛಾವಣಿ ಕುಸಿದಿದ್ದು, ಅಲ್ಲಿ ನೆರೆದಿದ್ದ ಜನರ ಮೇಲೆ ಬಿದ್ದಿದೆ. ಅವಶೇಷಗಳಿಂದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಇನ್ನು ಕೂಡಾ ಮುಂದುವರಿದಿದೆ. ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 89ಕ್ಕೇರಿದೆ.
Advertisement
Advertisement
ಪ್ರತಿನಿತ್ಯ ಈ ಮಸೀದಿಯಲ್ಲಿ ಸುಮಾರು 300-400 ಜನರು ಪ್ರಾರ್ಥನೆಗಾಗಿ ಸೇರುತ್ತಾರೆ. ಸ್ಫೋಟ ಸಂಭವಿಸಿದ ಸಂದರ್ಭ 300ಕ್ಕೂ ಹೆಚ್ಚು ಜನರು ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದರು. ಅವಶೇಷಗಳಡಿ ಇನ್ನೂ ಹಲವರು ಸಿಕ್ಕಿ ಬಿದ್ದಿರುವ ಶಂಕೆಯಿದ್ದು, ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಸರ್ಕಾರ ಬಡವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ತಿದೆ: ಮುರ್ಮು
Advertisement
ದಾಳಿಯನ್ನು ಭಯೋತ್ಪಾದನಾ ಸಂಘಟನೆ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ (TTP) ನಡೆಸಿದೆ ಎಂದು ಆರೋಪಿಸಲಾಗಿದೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಟಿಟಿಪಿ ವಕ್ತಾರ ಮೊಹಮ್ಮದ್ ಖುರಾಸಾನಿ, ಮಸೀದಿ ಅಥವಾ ಯಾವುದೇ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿಯನ್ನು ನಡೆಸುವುದು ನಮ್ಮ ನೀತಿಗಳಲ್ಲಿ ಒಳಗೊಂಡಿಲ್ಲ ಎಂದಿದ್ದಾರೆ.
Advertisement
ಖೈಬರ್ ಪಖ್ತುಂಖ್ವಾದ ಹಂಗಾಮಿ ಮುಖ್ಯಮಂತ್ರಿ ಮುಹಮ್ಮದ್ ಅಜಂ ಖಾನ್ ಅವರು ದಾಳಿಯಿಂದ ಸಾವನ್ನಪ್ಪಿದವರಿಗಾಗಿ ಮಂಗಳವಾರ ರಾಜ್ಯದಲ್ಲಿ ಶೋಕಾಚರಣೆಯ ದಿನವನ್ನು ಘೋಷಿಸಿದ್ದಾರೆ. ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ವಿಸ್ತಾರ ವಿಮಾನದಲ್ಲಿ ಅರೆಬೆತ್ತಲಾಗಿ ಓಡಾಡಿದ ಮಹಿಳೆ – ಗಲಾಟೆ ಮಾಡಿ ಸಿಬ್ಬಂದಿ ಮೇಲೆ ಹಲ್ಲೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k