ಬೆಂಗಳೂರು: ಕೆಲಸ ಕೊಡಿಸೋ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕನೊಬ್ಬನನ್ನು ಯಶವಂತಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಾರವಾರದ ಅನಂತನಾಥ್ ಹೆಬ್ಬಾರ್ ಅಲಿಯಾಸ್ ದಿನೇಶ್ ಗೌಡ ಬಂಧಿತ ಕಾಮುಕ.
ನಡೆದಿದ್ದೇನು?: ಕಾಮುಕ ದಿನೇಶ್ ಆನ್ ಲೈನ್ ನಲ್ಲಿ ವಾರ್ಷಿಕ 10 ಲಕ್ಷ ಪ್ಯಾಕೇಜ್ ಉದ್ಯೋಗದ ಆಫರ್ ನೀಡುತ್ತಿದ್ದನು. ಬಳಿಕ ಮಹಿಳೆಯರಂತೆ ಧ್ವನಿ ಬದಲಾಯಿಸಿ ಫೋನಿನಲ್ಲಿ ಮಾತನಾಡುತ್ತಿದ್ದನು. ಇತ್ತ ಮದುವೆಯ ನಂತ್ರ ಉದ್ಯೋಗ ಹರಸಿ ಬೆಂಗಳೂರಿಗೆ ಬಂದಿದ್ದ ಉತ್ತರ ಪ್ರದೇಶ ಮೂಲದ ದಂಪತಿ ಆನ್ ಲೈನ್ ಮೂಲಕ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸ್ವೀಕರಿಸಿದ ಕಾಮುಕ ಸಂದರ್ಶನಕ್ಕೆ ಬರುವಂತೆ ಮಹಿಳೆಗೆ ಕರೆ ಮಾಡಿದ್ದನು. ಅಲ್ಲದೇ ಖಾಸಗಿ ಹೋಟೆಲ್‍ನಲ್ಲಿ ಸಂದರ್ಶನ ಇದೆ ಒಬ್ಬರೇ ಬರಬೇಕು ಅಂತಾ ಕೂಡ ಹೇಳಿದ್ದನು.
Advertisement
Advertisement
ರಾಮನಗರ ಬಳಿಯಿರುವ ಪ್ರತಿಷ್ಠಿತ ರೆಸಾರ್ಟ್ ನಲ್ಲಿ ಸಂದರ್ಶನಕ್ಕಾಗಿ ಮಹಿಳೆ ಬಂದಾಗ, ಸಂದರ್ಶನ ಯಾವ ರೀತಿ ಇರುತ್ತದೆ ಎಂದು ವಿವರಿಸುತ್ತೇನೆ ಎಂದು ಕೊಠಡಿಗೆ ಕರೆದಿದ್ದ. ಅಲ್ಲದೇ ಕೊಠಡಿಯಲ್ಲಿ ಲೈಂಗಿಕ ಕ್ರಿಯೆಗೆ ಯತ್ನಿಸಿದ್ದನು. ಇದಕ್ಕೆ ಮಹಿಳೆ ಪ್ರತಿರೋಧ ತೋರಿದಾಗ ಅಸಾಮಿ ಮತ್ತು ಬರುವ ಮಾತ್ರೆ ಹಾಕಿ ಜ್ಯೂಸ್ ಕೊಟ್ಟ. ಕೂಡಲೇ ಕಾಮುಕನ ಚಲನವಲನ ಅರಿತ ಮಹಿಳೆ ಗಂಡನಿಗೆ ಫೋನ್ ಮಾಡಿದ್ದಳು. ತಕ್ಷಣವೇ ಮಹಿಳೆಯ ಗಂಡ ಹಾಗೂ ಸಿಬ್ಬಂದಿಗಳು ಹೋಟೆಲ್‍ಗೆ ದಾಳಿ ಮಾಡಿದ್ದಾರೆ. ದಾಳಿ ನಡೆಸುತ್ತಿದ್ದಂತೆ ಕಾಮುಕ ದಿನೇಶ್ ಪರಾರಿಯಾಗಿದ್ದನು.
Advertisement
ಇದನ್ನೂ ಓದಿ: ಕೆಲಸಕ್ಕೆ ಅರ್ಜಿ ಹಾಕುವ ಮುನ್ನ ಈ ಸುದ್ದಿ ಓದಿ
Advertisement
ಈ ಬಗ್ಗೆ ದಂಪತಿ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಸದ್ಯ ಆರೋಪಿ ದಿನೇಶ್ ನನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಇದೇ ರೀತಿ ಇಬ್ಬರು ಯುವತಿಯರ ಮೇಲೆ ದೌರ್ಜನ್ಯ ಎಸಗಿರುವ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.