ಲಿಮಾ: ಚಿಮು ನಾಗರೀಕತೆ ನೆಲಸಿದ್ದ ಪೆರುವಿನ ಪೂರ್ವ ಕೊಲಂಬಿಯಾ ಪ್ರದೇಶದಲ್ಲಿ ದೇವರ ಹೆಸರಿನಲ್ಲಿ ಬಲಿಯಾದ 227 ಮಕ್ಕಳ ಅಸ್ಥಿಪಂಜರಗಳು ದೊರಕಿವೆ.
ಕಳೆದ ಒಂದು ವರ್ಷದಿಂದ ರಾಜಧಾನಿ ಲಿಮಾದ ಉತ್ತರದ ಪ್ರವಾಸಿ ಪಟ್ಟಣವಾದ ಹುವಾನ್‍ಚಾಕೊ, ಚಿಮು ನಾಗರೀಕತೆಯಲ್ಲಿ ಮಕ್ಕಳನ್ನು ಬಲಿಕೊಡವ ಅತೀ ದೊಡ್ಡ ತಾಣ ಎಂದು ಪೆರುವಿನ ಪುರಾತತ್ವ ಇಲಾಖೆ ಅಲ್ಲಿ ಸಂಶೋಧನೆ ಮಾಡುತ್ತಿತ್ತು. ಈ ಜಾಗದಲ್ಲಿ ತುಂಬಾ ಮಕ್ಕಳ ಅಸ್ಥಿಪಂಜರಗಳು ಸಿಕ್ಕಿವೆ ಎಂದು ಪುರಾತತ್ವ ಶಾಸ್ತ್ರಜ್ಞ ಫೆರೆನ್ ಕ್ಯಾಸ್ಟಿಲ್ಲೊ ಮಂಗಳವಾರ ಹೇಳಿದ್ದಾರೆ.
Advertisement
Advertisement
ಫೆರೆನ್ ಕ್ಯಾಸ್ಟಿಲ್ಲೊ ಅವರು ಹೇಳುವ ಪ್ರಕಾರ, ಅಂದಿನ ಚಿಮು ನಾಗರೀಕತೆಯ ಸಂಸ್ಕøತಿಯಲ್ಲಿ ದೇವರನ್ನು ಸಮಾಧಾನಪಡಿಸಲು ಅಲ್ಲಿನ ಜನರು 4 ರಿಂದ 14 ವರ್ಷದ ಒಳಗಿನ ಮಕ್ಕಳನ್ನು ದೇವರಿಗೆ ಬಲಿ ಕೊಡುತ್ತಿದ್ದ ಮೂಢನಂಬಿಕೆ ಇತ್ತು. ಅವರು ಮಕ್ಕಳನ್ನು ಹೆಚ್ಚು ಶೀತ ಪ್ರದೇಶದಲ್ಲಿ ದೇವರಿಗೆ ಬಲಿಕೊಡುತ್ತಿದ್ದರು. ಈ ಪ್ರದೇಶದಲ್ಲಿ ಎಲ್ಲಿ ಆಗೆಯುತ್ತೀರೋ ಅಲ್ಲಿ ಎಲ್ಲಾ ಮಕ್ಕಳ ಅಸ್ಥಿಪಂಜರಗಳು ಸಿಗುತ್ತಿವೆ ಎಂದು ಹೇಳಿದ್ದಾರೆ.
Advertisement
ಈ ನಾಗರೀಕತೆಯಲ್ಲಿ ಮಕ್ಕಳನ್ನು ಸಮುದ್ರಕ್ಕೆ ಎದುರಾಗಿರುವ ಪ್ರದೇಶದಲ್ಲಿ ಹೆಚ್ಚು ಬಲಿಕೊಡಲಾಗಿದೆ. ಆದ್ದರಿಂದ ಸಮುದ್ರಕ್ಕೆ ಹತ್ತಿರ ಇರುವ ಪ್ರದೇಶದಲ್ಲಿ ಅತೀ ಹೆಚ್ಚು ಮಕ್ಕಳ ಬಲಿಕೊಟ್ಟಿರುವ ತಾಣಗಳು ಸಿಕ್ಕಿವೆ. ಹುವಾನ್‍ಚಾಕೊ ಎಂಬ ಪ್ರದೇಶದಲ್ಲಿ ಅತೀ ಹೆಚ್ಚು ಮಕ್ಕಳ ಅವಶೇಷಗಳು ಕಂಡು ಬಂದಿದ್ದು, ಈ ಪ್ರದೇಶವನ್ನು ಅತೀ ಹೆಚ್ಚು ಮಕ್ಕಳನ್ನು ಬಲಿಪಡೆದ ಪ್ರದೇಶ ಎಂದು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.
Advertisement
2018 ರ ಜೂನ್ ಅಲ್ಲಿ ಪಂಪಾ ಲಾ ಕ್ರೂಜ್ ಪಟ್ಟಣದ ನೆರೆಹೊರೆಯ ಸ್ಥಳದಲ್ಲಿ ಅಗೆದು ಸಂಶೋಧನೆ ಮಾಡುವಾಗ ಪುರಾತತ್ವ ಶಾಸ್ತ್ರಜ್ಞರಿಗೆ ಮೊದಲು ಮಕ್ಕಳ ಶವಗಳು ಸಿಕ್ಕವು. ಈ ಪ್ರದೇಶದಲ್ಲಿ 56 ಮಕ್ಕಳ ಅಸ್ಥಿಪಂಜರಗಳನ್ನು ಪತ್ತೆಯಾದವು. ಪಂಪಾ ಲಾ ಕ್ರೂಜ್ ಹುವಾನ್‍ಚಾಕೊದಿಂದ ಸ್ವಲ್ಪ ದೂರದಲ್ಲಿದ್ದು, ಅಲ್ಲಿ ಜೀವವನ್ನು ತ್ಯಾಗ ಮಾಡಿದ 140 ಮಕ್ಕಳು ಮತ್ತು 200 ಲಾಮಾಗಳ ಅವಶೇಷಗಳು 2018 ರ ಏಪ್ರಿಲ್‍ನಲ್ಲಿ ಪತ್ತೆಯಾಗಿದ್ದವು.
ಚಿಮು ನಾಗರೀಕತೆಯು ಪೆರುವಿಯನ್ ಕರಾವಳಿಯುದ್ದಕ್ಕೂ ಈಕ್ವೆಡಾರ್‍ವರೆಗೆ ವಿಸ್ತರಿಸಿತ್ತು. ಆದರೆ ಇಂಕಾ ಸಾಮ್ರಾಜ್ಯವು ಈ ಪ್ರದೇಶಗಳನ್ನು ವಶಪಡಿಸಿಕೊಂಡ ನಂತರ 1475 ರಲ್ಲಿ ಕಣ್ಮರೆಯಾಯಿತು.