Connect with us

Districts

ಮೈಸೂರಲ್ಲಿ ಬೆಟ್ಟಿಂಗ್‍ಗೆ ಇಟ್ರು 2 ಆಟೋ, 2 ಸ್ಕೂಟರ್!

Published

on

– ಪ್ರೀತಿಯ ಆಡಿನ ಮರಿ ಕೊಡಲು ಸಿದ್ಧ

ಮೈಸೂರು: ಮೊದಲ ಹಂತದ ಮತದಾನ ಮುಗಿದು ಅಭ್ಯರ್ಥಿಗಳು ಆತಂಕದಲ್ಲೇ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಎಲ್ಲೆಡೆ ಸೋಲು ಗೆಲುವಿನ ಲೆಕ್ಕಾಚಾರ ಭರದಿಂದ ಸಾಗುತ್ತಿದೆ. ಈ ನಡುವೆ ಕೆಲವರು ಬೆಟ್ಟಿಂಗ್‍ಗೆ ಇಳಿದಿದ್ದಾರೆ.

ಮೈಸೂರಿನಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿದೆ. ಉದಯಗಿರಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭಿಮಾನಿಗಳ ನಡುವೆ ಬೆಟ್ಟಿಂಗ್ ನಡೆದಿದೆ. ಅಫ್ಸರ್ ಎಂಬವರು ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್ ವಿಜಯಶಂಕರ್ ಪರವಾಗಿ ಬೆಟ್ಟಿಂಗ್ ಕಟ್ಟಿದ್ರೆ, ರಾಜು ಬಿಜೆಪಿಯ ಪ್ರತಾಪ್ ಸಿಂಹ ಪರ ಬೆಟ್ಟಿಂಗ್ ಕಟ್ಟಿದ್ದಾರೆ.

ಅಫ್ಸರ್ ಎರಡು ಆಟೋಗಳನ್ನು ಬೆಟ್ಟಿಂಗ್‍ಗೆ ಇಟ್ಟಿದ್ರೆ, ರಾಜು ತಮ್ಮ ಎರಡು ಸ್ಕೂಟರ್ ಗಳನ್ನು ಬೆಟ್ಟಿಂಗ್ ಕಟ್ಟಿದ್ದಾರೆ. ಅಫ್ಸರ್ ಗೆ ವಿಜಯಶಂಕರ್ ಮೇಲೆ ಎಷ್ಟು ವಿಶ್ವಾಸ ಇದೆ ಅಂದ್ರೆ ಎರಡು ಆಟೋ ಜೊತೆಗೆ ತಮ್ಮ ಪ್ರೀತಿ ಪಾತ್ರವಾದ ಹೈಬ್ರೀಡ್ ಆಡಿನ ಮರಿಯನ್ನೂ ಕೊಡಲು ತಯಾರಾಗಿದ್ದಾರೆ.

ಅಫ್ಸರ್ ಹಾಗೂ ರಾಜು ಇಬ್ಬರು ತಮ್ಮ ವಾಹನಗಳ ಕೀಲಿಗಳನ್ನು ಸ್ಥಳೀಯರಾದ ಫೈರೋಜ್ ಎಂಬವರ ಕೈಗೆ ಕೊಟ್ಟಿದ್ದಾರೆ.

Click to comment

Leave a Reply

Your email address will not be published. Required fields are marked *