Manipur | ಸಚಿವರ ಆಪ್ತ ಸಹಾಯಕನೇ ಕಿಡ್ನ್ಯಾಪ್‌ – ದುಷ್ಕರ್ಮಿಗಳ ಗುಂಪಿಗೆ ತೀವ್ರ ಶೋಧ

Public TV
2 Min Read
MANIPUR POLICE

ಇಂಫಾಲ್‌: ಮಣಿಪುರದ (Manipur0 ಗ್ರಾಹಕ ವ್ಯವಹಾರಗಳ ಸಚಿವ ಎಲ್. ಸುಸಿಂದ್ರೋ ಅವರ ಆಪ್ತ ಸಹಾಯಕರನ್ನು ಇಂಫಾಲ್ ಪೂರ್ವ ಜಿಲ್ಲೆಯ ಅವರ ನಿವಾಸದ ಬಳಿಯೇ ದುಷ್ಕರ್ಮಿಗಳ ಗುಂಪೊಂದು ಅಪಹರಿಸಿದೆ ಎಂದು ಪೊಲೀಸರು (Manipur Police) ತಿಳಿಸಿದ್ದಾರೆ.

ಎಸ್. ಸೊಮೊರೆಂಡ್ರೊ (43) ಅಪಹರಣವಾಗಿರುವ ವ್ಯಕ್ತಿ, ಘಟನೆ ಹಿಂದಿನ ಉದ್ದೇಶವು ಅಸ್ಪಷ್ಟವಾಗಿದೆ. ಘಟನೆಯ ಹೊಣೆಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ. ದುಷ್ಕರ್ಮಿಗಳ ಗುಂಪಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.

Manipur Imphal Crimenews IndianArmy

ಇದಕ್ಕೂ ಮುನ್ನ ಗುರುವಾರ ರಾತ್ರಿ ಬಿಷ್ಣುಪುರ ಜಿಲ್ಲೆಯ ಮಾಜಿ ಮುಖ್ಯ ಕಾರ್ಯದರ್ಶಿ ಓಯಿನಮ್ ನಬಕಿಶೋರ್ ಅವರ ನಿವಾಸದ ಮೇಲೂ ಶಸ್ತ್ರಸಜ್ಜಿತ ದಾಳಿಕೋರರು ಕನಿಷ್ಠ 5 ಸುತ್ತು ಗುಂಡು ಹಾರಿಸಿದ್ದ ಘಟನೆ ನಡೆದಿತ್ತು. ಅದೃಷ್ಟವಶಾತ್‌ ಯಾರಿಗೂ ಪ್ತಾಣಾಪಾಯ ಸಂಭವಿಸಿರಲಿಲ್ಲ. ಇದಾದ ಮರುದಿನವೇ ಸಚಿವರ ಆಪ್ತರನ್ನು ಕಿಡ್ನ್ಯಾಪ್‌ ಮಾಡಿರುವ ಘಟನೆ ನಡೆದಿದೆ.

ಘಟನಾ ಸ್ಥಳದಿಂದ ಖಾಲಿ ಕಾಟ್ರಿಡ್ಜ್‌ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ, ಬಿಷ್ಣುಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Mysuru | ದಸರಾ ಆನೆಗಳ ನಡುವೆ ಗುದ್ದಾಟ – ದಿಕ್ಕಾಪಾಲಾಗಿ ಓಡಿದ ಜನ

NIA

ಎನ್‌ಐಎ ಹೆಗಲಿಗೆ ಕೇಸ್‌:
ಇನ್ನೂ ಇಲ್ಲಿನ ಥಾಡೌ ಬುಡಕಟ್ಟು ಜನಾಂಗದ ಪ್ರಮುಖ ನಾಯಕ ಹಾಗೂ ಬಿಜೆಪಿ ವಕ್ತಾರನ ಪೂರ್ವಿಕರ ಮನೆ ಮೇಲಿನ ದಾಳಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಹಸ್ತಾಂತರಿಸುವಂತೆ ಮಣಿಪುರ ಸರ್ಕಾರ ಪೊಲೀಸರಿಗೆ ಸೂಚಿಸಿದೆ. ಇದನ್ನೂ ಓದಿ: ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ – ಹರಿದ್ವಾರದಲ್ಲಿ ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ

ಚುರಾಚಂದ್‌ಪುರ ಜಿಲ್ಲೆಯ ಟಿ ಮೈಕೆಲ್‌ ಲಮ್‌ಜತಾಂಗ್‌ ಹಾಕಿಪ್‌ ಅವರ ಪೋಷಕರು ಹಾಗೂ ಇತರರು ವಾಸಿಸುವ ಅವರ ಮನೆಯ ಮೇಲೆ ನಡೆದ ದಾಳಿಯ ಕುರಿತು ದಾಖಲಿಸಲಾದ ಪ್ರಕರಣವನ್ನು ಆದಷ್ಟು ಬೇಗ ಎನ್‌ಐಎಗೆ ರವಾನಿಸಬೇಕು ಎಂದು ರಾಜ್ಯ ಸರ್ಕಾರ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿದೆ. ವಿಷಯದ ಗಂಭೀರ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ತನಿಖೆಯನ್ನು ಎನ್‌ಐಎ ಹೆಗಲಿಗೆ ವಹಿಸುವಂತೆ ಪತ್ರದಲ್ಲಿ ತಿಳಿಸಿದೆ.

2023ರ ಮೇ ತಿಂಗಳಲ್ಲಿ ಮೈತೆ-ಕುಕಿ ಜನಾಂಗೀಯ ಹಿಂಸಾಚಾರ ಪ್ರಾರಂಭವಾದಾಗಿನಿಂದ ಅವರ ಮನೆ ಮೇಲೆ ನಡೆದಿರುವ 3ನೇ ದಾಳಿ ಇದಾಗಿದೆ. ಕಳೆದ ಆಗಸ್ಟ್‌ 31ರಂದು ಕುಕಿ ಸಮುದಾಯದ ಪ್ರಾಬಲ್ಯವಿರುವ ಚುರಾಚಂದ್‌ಪುರದಲ್ಲಿರುವ ಹಾಕಿಪ್ ಅವರ ಮನೆಯನ್ನು ಧ್ವಂಸಗೊಳಿಸಿ, ಬೆಂಕಿ ಹಚ್ಚಲಾಗಿತ್ತು. ಇದಕ್ಕೂ ಮುನ್ನ ಆಗಸ್ಟ್‌ 25ರಂದು ಸಹ ಶಸ್ತ್ರ ಸಜ್ಜಿತ ಗುಂಪೊಂದು ಹಾಕಿಪ್‌ ಅವರ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿತ್ತು.

Share This Article