ಬೆಂಗಳೂರು: ಮಂಡ್ಯದ ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವೋಟ್ ಮಾಡಿ ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ರಾಘವೇಂದ್ರ ಅವರು ಮೊದಲಿಗೆ ನೀವು ವೋಟ್ ಹಾಕಿ ಎಂದು ಪತ್ರ ಬರೆದಿದ್ದಾರೆ.
ಬೆಂಗಳೂರಿನ ನಿವಾಸಿ ರಾಘವೇಂದ್ರ ಈಸಲನಾದರೂ ವೋಟು ಮಾಡಮ್ಮ ತಾಯೇ. ಡೆಲ್ಲಿ ಟು ಮಂಡ್ಯ ನಾನೇ ನಿಮಗೆ ಫ್ಲೈಟ್ ಟಿಕೆಟ್ ಹಾಗೂ ಬಸ್ ಟಿಕೆಟ್ ಕಳುಹಿಸುತ್ತೀನಿ. ಆದರೆ ವೋಟು ಹಾಕುವುದನ್ನು ಮಿಸ್ ಮಾಡಬೇಡಿ ಎಂದು ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
ಮಂಡ್ಯ ಕ್ಷೇತ್ರದ ಮತದಾರರಾಗಿರುವ ನೀವು ಈ ಹಿಂದೆ ವಿಧಾನಸಭಾ ಹಾಗೂ ಲೋಕಸಭಾ ಉಪಚುನಾವಣೆಗೆ ಮತದಾನ ಮಾಡಿಲ್ಲ. ತಾವು ಒಂದು ಪಕ್ಷದ ಉನ್ನತ ಹುದ್ದೆಯನ್ನು ನಿರ್ವಹಿಸುತ್ತಿದ್ದೀರಿ. ಆದರೆ ನೀವೇ ಮತದಾನವನ್ನು ಮರೆತಿರುವುದು ಶೋಚನೀಯವಾಗಿದೆ. ಆದರೂ ನೀವು ಸಾಮಾಜಿಕ ಜಾಲತಾಣಗಲ್ಲಿ ಹೊಸದಾಗಿ ಮತದಾನ ಮಾಡುವರರಿಗೆ ಬೇಗನೇ ನೊಂದಣಿ ಮಾಡಿ ಎಂದು ಸಂದೇಶವನ್ನು ಕಳುಹಿಸಿದ್ದೀರಿ. ಇದು ಹಾಸ್ಯಸ್ಪದವಾಗಿದ್ದು, ಈಗಾಗಲೇ ಜನರು ನಿಮ್ಮನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹೀಗಾಗಿ ಈ ಬಾರಿಯಾದರೂ ನೀವು ಮತ ಚಲಾಯಿಸಿ ರಾಜಕೀಯ ನೈತಿಕತೆಯನ್ನು ಉಳಿಸಿಕೊಳ್ಳಿ. ಅದಕ್ಕಾಗಿ ನಾನು ನಿಮಗೆ ಪ್ರಯಾಣ ದರವನ್ನು ಉಚಿತವಾಗಿ ನೀಡಲು ನಾನು ಸಿದ್ಧ ಎಂದು ಬರೆದಿದ್ದಾರೆ.
ರಮ್ಯಾ ಟ್ವಿಟ್ಟರ್ ನಲ್ಲಿ” ಹೊಸದಾಗಿ ಮೊದಲ ಬಾರಿಗೆ ಮತದಾನ ಮಾಡುವ ಅರ್ಹತೆ ಯುವ ಮತದಾರರು ಬೇಗ ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರನ್ನು ಸೇರಿಸಿಕೊಳ್ಳಿ. ಸಮಯ ಬೇಗ ಹೋಗುತ್ತಿದೆ. ಭವಿಷ್ಯವೂ ನಿಮ್ಮದಾಗಿದೆ” ಎಂದು ಟ್ವೀಟ್ ಮಾಡುವ ಮೂಲಕ ಹೀಗಾಗಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದರು. ಆದರೆ ರಮ್ಯಾ ಮಾಡಿರುವ ಟ್ವೀಟ್ ನೆಟ್ಟಿಗರು ಕೋಪಗೊಂಡು ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಕ್ಲಾಸ್ ತೆಗೆದುಕೊಂಡಿದ್ದರು.
ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ರಮ್ಯಾ ಮಂಡ್ಯಕ್ಕೆ ಬಂದಿರಲಿಲ್ಲ. ಇದಾದ ಬಳಿಕ ಮಂಡ್ಯ ಲೋಕಸಭಾ ಉಪಚುನಾವಣೆಯ ಸಮಯದಲ್ಲೂ ರಮ್ಯಾ ಆಗಮಿಸಿರಲಿಲ್ಲ. ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾಗಿದ್ದು ಮತದಾನ ಮಾಡಲು ಆಗಮಿಸಿದ ರಮ್ಯಾ ವಿರುದ್ಧ ಮಂಡ್ಯದ ಮಂದಿ ಆಕ್ರೋಶ ಹೊರಹಾಕಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv