DistrictsHassanKarnatakaLatest

ಮಹಿಳೆಯೊಂದಿಗೆ ಅಸಭ್ಯವಾಗಿ ಸಿಕ್ಕಿಬಿದ್ದ ಸರ್ಕಾರಿ ನೌಕರ- ವಿಡಿಯೋ ಮಾಡಿ ಹರಿಬಿಟ್ಟ ಕಿಡಿಗೇಡಿಗಳು

ಹಾಸನ: ಜಿಲ್ಲೆಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿ ಮಹಿಳೆಯೊಂದಿಗೆ ಅಸಭ್ಯವಾಗಿ ಸಿಕ್ಕಿಬಿದ್ದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆನಂದ್ ಎಂಬವನು ನಿರ್ಜನ ಪ್ರದೇಶದಲ್ಲಿ ಕಾರಿನಲ್ಲಿ ಮಹಿಳೆಯೊಂದಿಗೆ ಇದ್ದಾಗ ಯಾರೋ ಆತನನ್ನು ನೋಡಿ ಮೊಬೈಲಿನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ. ಈ ವೇಳೆ ಆತ ನಾನು ಕೂಡ ಸಂಸಾರಸ್ಥ ಬಿಟ್ಟುಬಿಡಿ ಎಂದು ಬೇಡಿಕೊಂಡಿದ್ದಾನೆ. ಆಗ ವಿಡಿಯೋ ಮಾಡುತ್ತಿದ್ದವರು ನೀನು ಹೂಡಾದಲ್ಲಿ ಕೆಲಸ ಮಾಡುವುದು ನಮಗೆ ತಿಳಿದಿದೆ ಎಂದು ಬೆದರಿಕೆ ಹಾಕಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಮೊದಲು ವಿಡಿಯೋ ಮಾಡಿಕೊಂಡವರು ಆನಂದ್ ಬಳಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದು, ನಿರೀಕ್ಷಿತ ಪ್ರಮಾಣದ ಹಣ ಕೈ ಸೇರದ್ದರಿಂದ ವಿಡಿಯೋ ವೈರಲ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಘಟನೆ ನಡೆದ ನಂತರ ಮೂರು ದಿನದಿಂದ ಆನಂದ್ ಹೂಡ ಕಚೇರಿಗೆ ಬಂದಿಲ್ಲ. ರಜೆ ಹಾಕಿ ತೆರಳಿದ್ದು, ಅವರ ಫೋನ್ ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು. ವಿಡಿಯೋ ಮಾಡಿ ಬೆದರಿಕೆ ಹಾಕಿದವರು ಮತ್ತು ವೈರಲ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

Leave a Reply

Your email address will not be published. Required fields are marked *

Back to top button