ಮೈಸೂರು: ಮಾನಸಿಕ ಅಸ್ವಸ್ಥನೊಬ್ಬನ ಜೊತೆ ಸಲಿಂಗ ಕಾಮ ನಡೆಸಿದ್ದ ಕಾಮುಕನನ್ನು ಜಿಲ್ಲೆಯ ಎಚ್.ಡಿ.ಕೋಟೆಯ ಪೊಲೀಸರು ಬಂಧಿಸಿದ್ದಾರೆ.
ಎಚ್.ಡಿ.ಕೋಟೆ ತಾಲೂಕಿನ ನಂಜಯ್ಯನ ಕಾಲೋನಿ ಗ್ರಾಮದ ಮಣಿ (26) ಬಂಧಿತ ಆರೋಪಿ. ಮಣಿ ಅದೇ ಗ್ರಾಮದ ಮಾನಸಿಕ ಅಸ್ವಸ್ಥನಾದ 28 ವರ್ಷದ ದೇವಪ್ಪ (ಹೆಸರು ಬದಲಾಯಿಸಿದೆ) ಕೂಲಿ ಕೆಲಸಕ್ಕೆ ಹೋದಾಗ ಆತನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದ.
ಇದನ್ನೂ ಓದಿ: ಹುಡುಗರೇ ಬೀ ಕೇರ್‍ಫುಲ್.. ಫೇಸ್‍ಬುಕ್‍ನಲ್ಲಿದೆ ಹೋಮೊ ಸೆಕ್ಸ್ ಪೇಜ್!
ಘಟನೆ ನಡೆದು ಐದು ದಿನಗಳ ಬಳಿಕ ದೇವಪ್ಪ ನೋವಿನಿಂದ ಬಳಲುತ್ತಾ ತಾಯಿಗೆ ವಿಷಯ ತಿಳಿಸಿದ್ದಾನೆ. ವಿಷಯ ತಿಳಿದ ತಾಯಿ ಮಣಿ ವಿರುದ್ಧ ದೂರು ದಾಖಲಿಸಿದ್ದಾರೆ. ಮಣಿಯ ಪೈಶಾಚಿಕ ಕೃತ್ಯಕ್ಕೆ ಒಳಗಾದ ದೇವಪ್ಪನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.