ಬೆಂಗಳೂರು: ಪತ್ನಿಗೆ ತ್ರಿವಳಿ ತಲಾಖ್ ನೀಡುವುದಾಗಿ ಬೆದರಿಕೆ ಹಾಕಿದ್ದ ಪತಿಯನ್ನು ಬಂಧಿಸುವಲ್ಲಿ ಕೆ.ಆರ್.ಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ರಿಯಾಜ್ ಬಂಧಿತ ಪತಿಯಾಗಿದ್ದು, ಈತನ ವಿರುದ್ಧ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪತ್ನಿ ಶಬ್ನಂ ದೂರು ದಾಖಲಿಸಿದ್ದರು.
Advertisement
2004ರಲ್ಲಿ ರಿಯಾಜ್ ಮತ್ತು ಶಬ್ನಂ ಜೋಡಿ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಮದುವೆಯಾಗಿದ್ದರು. ವರದಕ್ಷಿಣೆಗಾಗಿ ಹಲವು ಭಾರಿ ಪೀಡಿಸಿದ್ದ ಪತಿ ರಿಯಾಜ್ ವರದಕ್ಷಣೆ ನೀಡದಿದ್ದರೆ ತ್ರಿವಳಿ ತಲಾಖ್ ನೀಡುವುದಾಗಿ ಬೆದರಿಕೆ ಹಾಕಿದ್ದ.
Advertisement
Advertisement
ವೃತಿಯಲ್ಲಿ ಇಂಜಿನಿಯರ್ ಆಗಿರುವ ರಿಯಾಜ್ ಕೆಲಸದ ನಿಮಿತ್ತ ಒರಿಸ್ಸಾದ ಭುವನೇಶ್ವರ್ ಹಾಗೂ ವಿದೇಶಕ್ಕೂ ತೆರಳಿರುವುದಾಗಿ ಸುಳ್ಳು ಹೇಳಿದ್ದ. ಪಾಸ್ ಪೋರ್ಟ್ ಇಲ್ಲದೆಯೇ ವಿದೇಶಕ್ಕೆ ತೆರಳುವ ಕುರಿತು ಅನುಮಾನಗೊಂಡ ಶಬ್ನಂ, ಪತಿ ಕುರಿತು ಆತ ಕೆಲಸ ಮಾಡುವ ಕಂಪೆನಿಯಲ್ಲಿ ವಿಚಾರಿಸಿದ್ದಾಳೆ. ಈ ವೇಳೆ ರಿಯಾಜ್ ನಗರದಲ್ಲೇ ಮತ್ತೊಂದು ಮಹಿಳೆ ಜೊತೆ ಆಕ್ರಮ ಸಂಬಂಧವಿರುವ ಅಂಶ ಬೆಳಕಿಗೆ ಬಂದಿದೆ. ಇದನ್ನೂ ಓದಿ: ತ್ರಿವಳಿ ತಲಾಖ್ ನಿಷೇಧ – ಸುಪ್ರೀಂನಿಂದ ಮಹತ್ವದ ತೀರ್ಪು
Advertisement
ರಿಯಾಜ್ ಆಕ್ರಮ ಸಂಬಂಧ ಹೊಂದಿರುವ ಮಹಿಳೆಗೆ ನಗರದಲ್ಲೇ ಮತ್ತೊಂದು ಮನೆ ಮಾಡಿಕೊಟ್ಟಿದ್ದಾನೆ. ಅಲ್ಲದೇ ಈಗಾಗಲೇ ತ್ರಿವಳಿ ತಲಾಖ್ ಕೇಂದ್ರ ಸರ್ಕಾರ ನಿಷೇಧ ಮಾಡಿದ್ದರೂ ತ್ರಿವಳಿ ತಲಾಖ್ ನೀಡುವುದಾಗಿ ಬೆದರಿಕೆ ಹಾಕುತ್ತಿದ್ದ ಕಾರಣ ಪತ್ನಿ ರಿಯಾಜ್ ವಿರುದ್ಧ ದೂರು ದಾಖಲಿಸಿದ್ದಾರೆ. ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ವಿಷಯ ತಿಳಿಯುತ್ತಿದಂತೆ ರಿಯಾಜ್ ನಾಪತ್ತೆಯಾಗಿದ್ದ. ಪ್ರಕರಣದ ವಿಚಾರಣೆ ನಡೆಸಿದ ಕೆ.ಆರ್.ಪುರ ಪೊಲೀಸರು ರಿಯಾಜ್ ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸ್ಪೀಡ್ ಪೋಸ್ಟ್ ನಲ್ಲಿ ತಲಾಖ್ ನೀಡಿದ್ದ ಪತಿ ವಿರುದ್ಧ ಗೆದ್ದು ಅನಿಷ್ಟ ಪದ್ದತಿಗೆ ಮುಕ್ತಿ ಹಾಡಿದ್ದು ಈ ಮಹಿಳೆ