ಬೆಂಗಳೂರು: ಲಾಡ್ಜ್ ಗೆ ಬಂದು ರೂಮ್ ಬುಕ್ ಮಾಡಿ, ಹೋಗುವಾಗ ಹೋಟೆಲ್‍ನಲ್ಲಿದ್ದ ಬೆಲೆಬಾಳುವ ಟಿವಿ ಕಳ್ಳತನ ಮಾಡುತ್ತಿದ್ದ ಬಾಗಲಕೋಟೆಯ ಕಳ್ಳನೊಬ್ಬ ಬೆಂಗಳೂರು ನಗರದಲ್ಲಿಯೂ ಪ್ರತ್ಯಕ್ಷವಾಗಿದ್ದಾನೆ.
ನಗರದ ಹೆಚ್‍ಎಸ್‍ಆರ್ ಲೇಔಟ್ ನಲ್ಲಿಯ ಸೆವೆನ್ ಆಲೀವ್ಸ್ ಹೋಟೆಲ್‍ನಲ್ಲಿ ಕಳ್ಳತನ ಮಾಡಿದ್ದಾನೆ. ಬಿಸಿನೆಸ್ ಸಂಬಂಧಪಟ್ಟಂತೆ ಬೆಂಗಳೂರಿಗೆ ಬಂದಿದ್ದು ಅಂತಾ ಹೇಳಿ ನಾಲ್ಕು ದಿನಕ್ಕೆ ಹೋಟೆಲ್‍ನಲ್ಲಿ ರೂಮ್ ಪಡೆದುಕೊಂಡಿದ್ದಾನೆ. ರೂಮ್ ಪಡೆದುಕೊಳ್ಳುವ ಮುನ್ನ ತಾನು ದೇವರಾಜ್ ಎಂಬ ಐಡಿ ಕಾರ್ಡ್‍ವೊಂದನ್ನ ಹೋಟೆಲ್ ಸಿಬ್ಬಂದಿಗೆ ನೀಡಿದ್ದಾನೆ. ಈತ ನೀಡಿರುವ ಐಡಿ ಕಾರ್ಡ್ ನಕಲಿ ಎಂದು ತಿಳಿದುಬಂದಿದೆ. ಇದನ್ನೂ ಓದಿ: 4 ಲಾಡ್ಜ್ ಗಳಲ್ಲಿ ಎರಡೆರಡು ರೂಂ ಬುಕ್ ಮಾಡಿ ಎಲ್‍ಇಡಿ ಟಿವಿಗಳನ್ನೇ ಎಗರಿಸಿದ ಖತರ್ನಾಕ್ ಕಳ್ಳ
Advertisement
ಜನವರಿ 4 ರಂದು ಈ ಕಳ್ಳತನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಳ್ಳ ಟಿವಿ ಜೊತೆ ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದೇ ವ್ಯಕ್ತಿ ಜನವರಿ 8ರಂದು ಬಾಗಲಕೋಟೆಯ 4 ಲಾಡ್ಜ್ ಗಳಲ್ಲಿ 8 ಎಲ್‍ಇಡಿ ಟಿವಿಗಳನ್ನು ಕಳ್ಳತನ ಮಾಡಿದ್ದಾನೆ. ಈ ಸಂಬಂಧ ಹೆಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
https://youtu.be/tbM9njEL8-w
Advertisement
Advertisement