ಬೆಳಗಾವಿ: ಫೇಸ್ಬುಕ್ನಲ್ಲಿ ಯುವತಿಯರನ್ನು ಪರಿಚಯಿಸಿಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ಕೆಕೆ ಕೊಪ್ಪ ಗ್ರಾಮದ ಮಹೇಶ್ ಚಿಣ್ಣವರ್ ಎಂಬ ಬಂಧಿತ ಯುವಕ. ಫೇಸ್ಬುಕ್ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡು ನಂತರ ಪ್ರೀತಿ, ಪ್ರೇಮದ ನಾಟಕವಾಡಿ ವಂಚಿಸುತ್ತಿದ್ದನು ಎಂದು ಹೇಳಲಾಗಿದೆ.
Advertisement
ಮಹೇಶ್ ನ ವಿಚಾರಣೆ ವೇಳೆಯಲ್ಲಿ ಇತ್ತೀಚಿಗೆ ಬ್ಯಾಂಕ್ ಮಹಿಳಾ ಉದ್ಯೋಗಿಯೊಬ್ಬರಿಗೂ ಈತ ಇದೇ ರೀತಿ ಮಾಡಿದ್ದನೆಂಬ ಮತ್ತೊಂದು ಪ್ರಕರಣ ಬಯಲಾಗಿದೆ.
Advertisement
Advertisement
ನನ್ನ ಫೋಟೋ ಇಟ್ಟುಕೊಂಡು ಹಣ, ಬೈಕ್ ಕೊಡಿಸು ಎಂದು ಪೀಡಿಸುತ್ತಿದ್ದಾನೆ. ಒಂದು ವೇಳೆ ಹಣ ಕೊಡದೆ ಇದ್ದರೆ ಬೆತ್ತಲೆ ಫೋಟೋ ಕಳುಹಿಸುವಂತೆ ಬೆದರಿಕೆ ಹಾಕಿದ್ದಾನೆಂದು ನೊಂದ ಯುವತಿಯು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು.
ನೊಂದ ಯುವತಿಯ ದೂರಿನ ಆಧಾರದ ಮೇಲೆ ಆರೋಪಿ ಮಹೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.