ಮಂಡ್ಯ: ವ್ಯಕ್ತಿಯೊಬ್ಬರು ಪೊಲೀಸರ ಎದುರೇ ಗನ್ ತೋರಿಸಿ ಬೆದರಿಕೆ ಹಾಕಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಗ್ರಾಮದಲ್ಲಿ ನಡೆದಿದೆ.
ರೋಹಿತ್ ಎಂಬವರೇ ಗನ್ ತೋರಿಸಿ ಬೆದರಿಕೆ ಹಾಕಿದ ವ್ಯಕ್ತಿ. ರೋಹಿತ್ ತಮ್ಮ ಪತ್ನಿಯ ಸಂಬಂಧಿಗಳಾದ ಮಂಜ ಮತ್ತು ಸುರೇಶ್ ಎಂಬವರಿಗೆ ಗನ್ ತೋರಿಸಿ ಫೈರ್ ಮಾಡುವುದಾಗಿ ಹೇಳಿ ಬೆದರಿಕೆ ಹಾಕಿದ್ದಾರೆ. ರೋಹಿತ್ ಮಾವನಿಗೆ ಮಂಜ ಮತ್ತು ಸುರೇಶ್ ಎಂಬವರೊಂದಿಗೆ ಜಮೀನು ವಿವಾದವಿತ್ತು. ಜಮೀನು ವಿಷಯವಾಗಿ ಗ್ರಾಮದಲ್ಲಿ ರೋಹಿತ್ ಮಾವ, ಮಂಜ ಮತ್ತು ಸುರೇಶ್ ನಡುವೆ ಪದೇ ಪದೇ ಸಣ್ಣ ಪುಟ್ಟ ಮಾತಿನ ಚಕಮಕಿ ನಡೆಯುತ್ತಿತ್ತು
Advertisement
.
Advertisement
ಸೋಮವಾರ ರೋಹಿತ್ ತನ್ನ ಪತ್ನಿ ಹಾಗೂ ಸಂಬಂಧಿಕರೊಂದಿಗೆ ಜಮೀನಿನ ಬಳಿ ಬಂದಿದ್ದಾರೆ. ಈ ವೇಳೆ ಮೂವರ ನಡುವೆ ಜಗಳ ನಡೆದಿದೆ. ಜಗಳದಲ್ಲಿ ಕೋಪಗೊಂಡ ರೋಹಿತ್ ತಮ್ಮ ಬಳಿಯಿದ್ದ ಗನ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಈ ಘಟನೆ ವೇಳೆ ಪೊಲೀಸರಾದ ಶ್ರೀಧರ್ ಮತ್ತು ಹುಚ್ಚೇಗೌಡ ಸ್ಥಳದಲ್ಲಿದ್ದು, ಪಕ್ಕದ ಜಮೀನಿನ ಬೆಳೆ ನಾಶದ ದೂರಿನ ಪರಿಶೀಲನೆಗೆಂದು ಬಂದಿದ್ದರು.
Advertisement
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ರೋಹಿತ್ ಬಳಿಯ ಗನ್ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ರೋಹಿತ್ ಆರ್ಮಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.