ಧಾರವಾಡ: ಕೆಲವೊಬ್ಬರಿಗೆ ಬೈಕ್ ಕ್ರೇಜ್ ಸ್ವಲ್ಪ ಹೆಚ್ಚಾಗಿಯೇ ಇರುತ್ತೆ. ಕೆಲವರು ಹಳೆಯ ಬೈಕ್ ತಂದು ಅದನ್ನ ಸಿಂಗಾರ ಮಾಡಿ ರಸ್ತೆಗೆ ಇಳಿಸುತ್ತಾರೆ. ಧಾರವಾಡದ ಬೈಕ್ ಪ್ರೇಮಿಯೊಬ್ಬ ತನ್ನ ಬುಲೆಟ್ ಬೈಕಿಗೆ ಚಿನ್ನದ ಲೇಪನ ಮಾಡಿಸಿದ್ದಾರೆ.
ತಾಲೂಕಿನ ಹಿರೇಮಲ್ಲಿಗವಾಡ ಗ್ರಾಮದ ಬಸಪ್ಪ ಕಲ್ಲೂರನ ಒಬ್ಬ ವ್ಯಕ್ತಿ ತನ್ನ ಬೈಕಿಗೆ ಚಿನ್ನದ ಲೇಪನ ಮಾಡಿಸಿದ್ದಾರೆ. ಹಳ್ಳಿ ಹೈದನಾಗಿದರೂ ಇವರಿಗೆ ಬುಲೆಟ್ ಹಾಗೂ ರಾಯಲ್ ಎನ್‍ಫಿಲ್ಡ್ ನಂತ ಬೈಕ್ ತಂದು ಅದನ್ನು ಸಿಂಗಾರ ಮಾಡುವುದು ಫ್ಯಾಶನ್ ಆಗಿದೆ. ಈ ಹಳ್ಳಿ ಹೈದ ಕಳೆದ 4 ವರ್ಷಗಳ ಹಿಂದೆ 1984 ಮಾಡೆಲ್ 550 ಸಿಸಿ ರಾಯಲ್ ಎನ್‍ಫೀಲ್ಡ್ ಖರೀದಿ ಮಾಡಿದ್ದರು. ಅದನ್ನು ಈಗ 2 ಲಕ್ಷ ಚಿನ್ನದ ಲೇಪನ ಮಾಡಿಸಿ ಚಕಾಚಕ್ ಮಾಡಿದ್ದಾರೆ. ಈ ಬೈಕಿಗೆ ಆತ ಬರೋಬ್ಬರಿ 9 ಲಕ್ಷ ರೂ. ಖರ್ಚು ಮಾಡಿದ್ದಾರೆ.
Advertisement
Advertisement
ಈ ರಾಯಲ್ ಎನ್‍ಫೀಲ್ಡ್ ಇಷ್ಟು ದುಬಾರಿ ಆಗಲು ಕಾರಣ ಏನೆಂದರೆ 2 ಲಕ್ಷ ಚಿನ್ನದ ಲೇಪನ, 1.5 ಲಕ್ಷ ಎಂಜಿನ್ ರಿಪೇರಿ, ಎನ್‍ಫೀಲ್ಡ್ ಗೆ ಹಿತ್ತಾಳೆಯ ಸಾಮಗ್ರಿ ಹಾಕಲಾಗಿದೆ. ಇನ್ನು ಈ ಬೈಕ್ ಡಬ್ ಡಬ್ ಎಂದು ರಸ್ತೆ ಮೇಲೆ ಹೊರಟ್ರೆ ಎಲ್ಲರ ಚಿತ್ತ ಈ ರಾಯಲ್‍ನತ್ತನೇ ಇರುತ್ತದೆ. ಕಳೆದ ವರ್ಷ ಈ ರಾಯಲ್ ಎನ್‍ಫೀಲ್ಡ್ ಮಾಲೀಕ ತಮ್ಮ ಹೊಲ ಮಾರಿ ಎನ್‍ಫೀಲ್ಡ್ ಖರೀದಿ ಮಾಡಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv