Advertisements

ಕತ್ತು ಕೊಯ್ದು ವ್ಯಕ್ತಿಯ ಬರ್ಬರ ಹತ್ಯೆ

ಕೋಲಾರ: ನಗರದ ಮಹಾಲಕ್ಷ್ಮೀ ಲೇಔಟ್ ಬಳಿ ದುಷ್ಕರ್ಮಿಗಳು ವ್ಯಕ್ತಿಯೊಬ್ಬರ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

Advertisements

ಸಾಜಾದ್ (32) ಕೊಲೆಯಾದ ದುರ್ದೈವಿ. ಮೂಲತಃ ಉತ್ತರಪ್ರದೇಶ ಸಜಾದ್, ಷಹಿಂಸಾ ನಗರದ ಬಿಲಾಲ್ ಮಸೀದಿ ಬಳಿ ಕಳೆದ 5 ವರ್ಷಗಳಿಂದ ಬಾರ್ಬರ್ ಶಾಪ್ ನಡೆಸುತ್ತಿದ್ದನು. ಇಂದು ಮುಂಜಾನೆ ದುಷ್ಕರ್ಮಿಗಳು ಸಾಜಾದ್ ಮನೆಯ ಮುಂದೆಯೇ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

Advertisements

ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲವೆಂದು ಪೊಲೀಸರು ತಿಳಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಘಟನೆ ಸಂಬಂಧ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Advertisements
Advertisements
Exit mobile version