ಕೈರೋ: ವ್ಯಕ್ತಿಯೋರ್ವ ಮೊಬೈಲ್ ಫೋನ್ ನುಂಗಿ ನಂತರ ಅದು ವಿಸರ್ಜನೆ ಮೂಲಕ ನೈಸರ್ಗಿಕವಾಗಿ ಹಾದು ಹೋಗುತ್ತದೆ ಅಂತ 6 ತಿಂಗಳು ಹಾಗೆಯೇ ಕಾಲ ಕಳೆದಿರುವ ವಿಚಿತ್ರವಾದ ಘಟನೆ ಈಜಿಪ್ಟಿನಲ್ಲಿ ನಡೆದಿದೆ.
ಹೌದು ವ್ಯಕ್ತಿಯೋರ್ವ ಮೊಬೈಲ್ ಫೋನ್ ಅನ್ನು ನುಂಗಿ ಅದು ವಿಸರ್ಜನೆ ಮೂಲಕ ಹಾದು ಹೋಗಿ ಸರಿಹೋಗುತ್ತದೆ ಎಂದು ಭಾವಿಸಿ ವೈದ್ಯರನ್ನು ಭೇಟಿಯಾಗಿರಲಿಲ್ಲ. ಆದರೆ ಸೇವಿಸಿದ ಆಹಾರ ದೇಹದೊಳಗೆ ಹಾದು ಹೋಗಲು ಸಾಧ್ಯವಾಗದೇ ಕೊನೆಗೆ ವ್ಯಕ್ತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಇದನ್ನೂ ಓದಿ: ನಮ್ಮ ಜಗತ್ತು.. ನಮ್ಮ ವಿಶ್ವ.. ಐ ಲವ್ ಯೂ ಕಂದ
Advertisement
Advertisement
ನಂತರ ತಕ್ಷಣ ವೈದ್ಯರನ್ನು ಭೇಟಿ ಮಾಡಿದ್ದಾನೆ. ಈ ವೇಳೆ ವೈದ್ಯರು ಆತನ ಹೊಟ್ಟೆಯನ್ನು ಎಕ್ಸ್-ರೇ, ಸ್ಕ್ಯಾನಿಂಗ್ ಮಾಡಿದಾಗ, ಆತನ ಹೊಟ್ಟೆಯೊಳಗೆ ಫೋನ್ ಇರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ನಂತರ ವೈದ್ಯರು ಅಸ್ವಾನ್ ವಿಶ್ವವಿದ್ಯಾನಿಲಯ ಆಸ್ಪತ್ರೆಯಲ್ಲಿ ಕರಳು ಮತ್ತು ಕಿಬ್ಬೊಟ್ಟೆಯನು ಪರೀಕ್ಷಿಸಿ, ಶಸ್ತ್ರ ಚಿಕಿತ್ಸೆ ಮೂಲಕ ಫೋನ್ ಅನ್ನು ಹೊಟ್ಟೆಯಿಂದ ಹೊರತೆಗೆದಿದ್ದಾರೆ. ಇದನ್ನೂ ಓದಿ: 100 ಕೋಟಿ ಕೇವಲ ಅಂಕಿಯಲ್ಲ, ಇತಿಹಾಸದಲ್ಲಿ ದಾಖಲಾದ ಹೊಸ ಅಧ್ಯಾಯ: ಮೋದಿ
Advertisement
Advertisement
ಈ ಕುರಿತಂತೆ ಮಾತನಾಡಿದ ಅಸ್ವಾನ್ ಯೂನಿವರ್ ಸಿಟಿ ಹಾಸ್ಪಿಟಲ್‍ನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಅಶ್ರಫ್ ಮಾಬಾದ್, ವ್ಯಕ್ತಿ ಮೊಬೈಲ್ ನುಂಗಿರುವುದು ಇದೇ ಮೊದಲ ಪ್ರಕರಣವಾಗಿದೆ. ರೋಗಿ ಆರು ತಿಂಗಳ ಹಿಂದೆ ನುಂಗಿದ ಮೊಬೈಲ್ ಇದೀಗ ಆತನು ಸೇವಿಸಿದ ಆಹಾರ ದೇಹದೊಳಗೆ ಹಾದುಹೋಗದಂತೆ ತಡೆದಿದೆ. ಆದರೆ ಸದ್ಯ ಶಸ್ತ್ರ ಚಿಕಿತ್ಸೆ ಮೂಲಕ ಮೊಬೈಲ್ ಅನ್ನು ಹೊಟ್ಟೆಯಿಂದ ಹೊರತೆಗೆಯಲಾಗಿದೆ ಮತ್ತು ಆದಷ್ಟು ಬೇಗ ವ್ಯಕ್ತಿ ಚೇತರಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇದೆ ಎಂದಿದ್ದಾರೆ.