ಮೈಸೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ನಾಲೆಗೆ ತಳ್ಳಿ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಅನುಷಾ(28), ಪುತ್ರಿಯರಾದ ಪೂರ್ವಿಕ(6), ಲಿಖಿತ(2) ಮೃತ ದುರ್ದೈವಿಗಳು. ಮೈಸೂರು ಜಿಲ್ಲೆ ಕೆ.ಆರ್.ನಗರ ಪಟ್ಟಣದ ಹೊರವಲಯದಲ್ಲಿರುವ ಚಾಮರಾಜ ಬಲದಂಡೆ ನಾಲೆಗೆ ಪತ್ನಿ ಹಾಗೂ ಮಕ್ಕಳಿಬ್ಬರನ್ನು ತಳ್ಳಿ ಪತಿ ಪರಮೇಶ್ ಕೊಲೆ ಮಾಡಿದ್ದಾನೆ.
Advertisement
ಪರಮೇಶ್ ಮತ್ತು ಅನುಷಾ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಬಾಗೇವಾಳು ಗ್ರಾಮದ ನಿವಾಸಿಗಳು. ಚಾಮರಾಜ ಬಲದಂಡೆ ನಾಲೆಗೆ ಬೈಕ್‍ನಲ್ಲಿ ಕರೆದುಕೊಂಡು ಬಂದು ನೀರು ಹರಿಯುತ್ತಿದ್ದ ನಾಲೆಗೆ ಬೈಕ್ ಸಮೇತ ಹೆಂಡತಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ತಳ್ಳಿ ಪರಮೇಶ್ ಪರಾರಿಯಾಗಿದ್ದ. ಬಳಿಕ ಭಯದಿಂದ ಕೊನೆಗೆ ಕೆ.ಆರ್.ನಗರ ಪಟ್ಟಣ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
Advertisement
ಪೂರ್ವಿಕ ಶವ ಸೌತನಹಳ್ಳಿ ಗ್ರಾಮದ ಬಳಿಯ ನಾಲೆಯಲ್ಲಿ ಪತ್ತೆಯಾಗಿದೆ. ಮತ್ತಿಬ್ಬರ ಶವಕ್ಕಾಗಿ ಹುಡುಕಾಟ ನಡೆದಿದೆ.