ಬಾಗಲಕೋಟೆ: ಹೆಂಡತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಸಹೋದರನ ಮಗನನ್ನ ಚಿಕ್ಕಪ್ಪನೇ ಕೊಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೋವಳ್ಳಿ ಗ್ರಾಮದಲ್ಲಿ ನಡೆದಿದೆ.
25 ವರ್ಷದ ಪರುಶುರಾಮ ಮಾಳಗಿ ಕೊಲೆಯಾದ ವ್ಯಕ್ತಿ. ಮೃತ ಪರಶುರಾಮ ಚಿಕ್ಕಪ್ಪ ಕರಿಯಪ್ಪನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನು. ಅಲ್ಲದೇ ಪರಶುರಾಮನಿಗೆ ಮದುವೆಯಾಗಿ ಮಕ್ಕಳಾದ್ರೂ, ಚಿಕ್ಕಮ್ಮಳೊಂದಿಗಿನ ಅಕ್ರಮ ಸಂಬಂಧ ಬಿಟ್ಟಿರಲಿಲ್ಲ. ಈ ವಿಷಯ ಚಿಕ್ಕಪ್ಪನಾದ ಕರಿಯಪ್ಪನಿಗೆ ಇರಿಸುಮುರಿಸು ಉಂಟುಮಾಡಿತ್ತು.
ಇದನ್ನೂ ಓದಿ: ಅತ್ತಿಗೆ ಮೇಲಿನ ಆಸೆಗಾಗಿ ತಲಾಖ್ ನೀಡುವಂತೆ ಹೆಂಡತಿಗೆ ಕಿರುಕುಳ
ಭಾನುವಾರ ರಾತ್ರಿ ಪರಶುರಾಮ ಮಲಗಿರುವ ವೇಳೆಯಲ್ಲಿ ಕರಿಯಪ್ಪ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಜಮಖಂಡಿ ಡಿವೈಎಸ್‍ಪಿ ರಾಮನಗೌಡ ಹಟ್ಟಿ ಭೇಟಿ ನೀಡಿದ್ದು, ಆರೋಪಿ ಕರಿಯಪ್ಪ ಮಾಳಗಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪ್ರೀತ್ಸೋ ಎಂದು ಬೆನ್ನು ಬಿದ್ದ ಯುವತಿಯ ಕಾಟಕ್ಕೆ ಸುಸ್ತಾದ ಟೆಕ್ಕಿ!- ಪೊಲೀಸ್ ಠಾಣೆಯಲ್ಲಿ ದೂರು