ಮಂಡ್ಯ: ತಾಯಿಯನ್ನು ಬೈದಿದ್ದಕ್ಕೆ ಪಕ್ಕದ ಮನೆಯವನ ರುಂಡ ಕತ್ತರಿಸಿ ಠಾಣೆಗೆ ತೆಗೆದುಕೊಂಡು ಬಂದ ವಿಚಿತ್ರ ಘಟನೆಯೊಂದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚಿಕ್ಕಬಾಗಿಲು ಗ್ರಾಮದಲ್ಲಿ ನಡೆದಿದೆ.
ಪಶುಪತಿ(30) ರುಂಡ ತೆಗೆದುಕೊಂಡು ಠಾಣೆಗೆ ಬಂದ ವ್ಯಕ್ತಿ. ಪಶುಪತಿ ತನ್ನ ಪಕ್ಕದ ಮನೆಯ ಸ್ನೇಹಿತ ಗಿರೀಶ್ ತಲೆಯನ್ನು ಕಡಿದು ಪೊಲೀಸ್ ಠಾಣೆಗೆ ಬಂದಿದ್ದಾನೆ. ಪಶುಪತಿ ಹಾಗೂ ಗಿರೀಶ್ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದು, ಚಿಕ್ಕಬಾಗಿಲಿನಿಂದ ಕೊಳತೂರಿಗೆ ಹೋಗುವ ರಸ್ತೆಯಲ್ಲಿ ಪಶುಪತಿ ಆತನ ತಲೆ ಕತ್ತರಿಸಿದ್ದಾನೆ. ಇದನ್ನೂ ಓದಿ: 2ನೇ ಹೆಂಡತಿಯ ಕೊಲೆಗೈದು ರುಂಡದೊಂದಿಗೆ ಪೊಲೀಸರಿಗೆ ಶರಣಾದ ಪತಿ!
Advertisement
Advertisement
ಪಶುಪತಿ ತಂದೆ ನಾಗಣ್ಣ ಹಾಗೂ ತಾಯಿ ಸವಿತಾರಾಗಿದ್ದು, ಪಶುಪತಿಗೆ ಇನ್ನೂ ಮದುವೆಯಾಗಿಲ್ಲ. ಪಶುಪತಿ ಬೆಂಗಳೂರಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಗಣೇಶ ಹಬ್ಬಕ್ಕೆಂದು ಊರಿಗೆ ಬಂದಿದ್ದ. ಈ ವೇಳೆ ತನ್ನ ಸ್ನೇಹಿತನ ತಲೆ ಕತ್ತರಿಸಿ ಪೊಲೀಸ್ ಠಾಣೆಗೆ ಬಂದಿದ್ದಾನೆ.
Advertisement
ಪಶುಪತಿ ರುಂಡ ತೆಗೆದುಕೊಂಡು ಠಾಣೆಗೆ ಬಂದಿದ್ದಾನೆ. ಈ ವೇಳೆ ಆತನ ಕೈಯಲ್ಲಿ ರುಂಡ ಇರುವುದನ್ನು ನೋಡಿ ಸಾರ್ವಕನಿಕರು ಬೆಚ್ಚಿಬಿದ್ದಿದ್ದಾರೆ. ಸದ್ಯ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv