ಹುಬ್ಬಳ್ಳಿ: ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಇಂದಿಗೂ ಶಕ್ತಿ ಪ್ರದರ್ಶನ ಸ್ಪರ್ಧೆಗಳು ನಡೆಯುತ್ತಿರುತ್ತವೆ. ಹುಬ್ಬಳ್ಳಿಯಲ್ಲಿ ಯುವಕನೊಬ್ಬ ಬರೋಬ್ಬರಿ 150 ಕೆಜಿ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತು 2 ಕಿ.ಮೀ. ನಡೆಯುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾತಗಾಂ ಗ್ರಾಮದ ನಾಗರಾಜ್ ಬಮ್ಮನಗಢ ಈ ಸಾಧನೆ ಮಾಡಿದ ಯುವಕ. ಹನುಮ ಜಯಂತಿಯ ಅಂಗವಾಗಿ ಹುಬ್ಬಳ್ಳಿ ತಾಲೂಕಿನ ಕುಂದಗೋಳ ಗ್ರಾಮದಲ್ಲಿ ಶಕ್ತಿ ಪ್ರದರ್ಶನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
Advertisement
Advertisement
ನಾಗರಾಜ್ ಅವರು ಹೆಗಲ ಮೇಲೆ 100 ಕೆ.ಜಿ. ಜೋಳದ ಚೀಲ, ಆ ಚೀಲದ ಮೇಲೆ 30 ಕೆ.ಜಿ. ತೂಕದ ಬಾಲಕ ಮತ್ತು ತಮ್ಮ ಎರಡು ಕಾಲಿಗೆ ತಲಾ 10 ಕೆ.ಜಿ ಕಲ್ಲುಗಳನ್ನು ಕಟ್ಟಿಕೊಂಡು ಗ್ರಾಮದ ಹೆಬ್ಬಾಗಿಲಿನಿಂದ ಹನುಮಂತ ದೇವಾಲಯದವರೆಗೆ ಸುಮಾರು ಎರಡು ಕಿ.ಮೀ. ನಡೆದು ಶಕ್ತಿ ಪ್ರದರ್ಶನದ ಜೊತೆ ಭಕ್ತಿಯನ್ನು ತೋರಿಸಿದ್ದಾರೆ.