ಹುಬ್ಬಳ್ಳಿ: ಪಾಕಿಸ್ತಾನದ ಯುವತಿಯನ್ನು ಮದುವೆ ಆದ ಹುಬ್ಬಳ್ಳಿ ಯುವಕರೊಬ್ಬರು ತನ್ನ ಪತ್ನಿಯನ್ನು ಭಾರತಕ್ಕೆ ಕರೆತರಲು ಪರದಾಡುತ್ತಿದ್ದಾರೆ. ಹುಬ್ಬಳ್ಳಿಯ ನವನಗರ ಮೂಲದ ಡೇನಿಯಲ್ ಹೆನ್ರಿ ದೇವನೂರು ಎಂಬವರೇ ತನ್ನ ಪತ್ನಿಗಾಗಿ ಪರದಾಡುತ್ತಿರುವ ವ್ಯಕ್ತಿ.
ಡೇನಿಯಲ್ 2016 ಜೂನ್ 25 ರಂದು ದೂರದ ಸಂಬಂಧಿಯಾದ ಪಾಕಿಸ್ತಾನ ಮೂಲದ ಸಿಲ್ವಿಯಾ ನೂರಿನ್ ಎಂಬ ಯುವತಿಯನ್ನು ಲಾಹೋರ್‍ನ ಪೆಂಟ್ ಕೊಸ್ಟಲ್ ಚರ್ಚ್‍ನಲ್ಲಿ ವಿವಾಹವಾಗಿದ್ದರು. ನಂತರ ಜುಲೈ 11 ರಂದು ಭಾರತಕ್ಕೆ ಹಿಂದಿರುಗಿ ಬಂದಿದ್ದರು.
Advertisement
Advertisement
ಆದರೆ ಈಗ 9 ತಿಂಗಳಾದ್ರು ಕೂಡ ವೀಸಾ ಸಿಗದೇ ಪರದಾಡುತ್ತಿದ್ದಾರೆ. ತನ್ನ ಪತ್ನಿಯನ್ನು ಭಾರತಕ್ಕೆ ಕರೆ ತರಲು ಸತತ ಪ್ರಯತ್ನ ಮಾಡುತ್ತಿರುವ ಡೇನಿಯಲ್‍ಗೆ ಪಾಕಿಸ್ತಾನ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ತನ್ನ ಪತ್ನಿ ಭಾರತಕ್ಕೆ ಬರಬೇಕಾದ್ರೆ ಸ್ಪಾನ್ಸರ್‍ಶಿಪ್ ಸರ್ಟಿಫಿಕೇಟ್ ಪಡೆಯಬೇಕು. ಅದಕ್ಕೆ `ಎ’ ಗ್ರೇಡ್ ಪಾಕಿಸ್ತಾನದ ಅಧಿಕಾರಿ ಸಹಿ ಮಾಡಬೇಕು. ಅಂದಾಗ ಮಾತ್ರ ಭಾರತಕ್ಕೆ ಬರಲು ವಿಜಿಟರ್ ವೀಸಾ ಸಿಗಲಿದೆ. ಆದ್ರೆ ಪಾಕಿಸ್ತಾನದ ಯಾವೊಬ್ಬ ಅಧಿಕಾರಿಯೂ ಕೂಡ ಸ್ಪಾನ್ಸರ್‍ಶಿಪ್ ಸರ್ಟಿಫಿಕೆಟ್‍ಗೆ ಸಹಿ ಮಾಡಲು ಮುಂದೆ ಬರುತ್ತಿಲ್ಲವಾದ ಕಾರಣಡೇನಿಯಲ್ ಪತ್ನಿಗಾಗಿ ಪರಿತಪಿಸುವಂತಾಗಿದೆ.
Advertisement
ಭಾರತ ಹಾಗೂ ಪಾಕಿಸ್ತಾನದ ರಾಜತಾಂತ್ರಿಕ ಸಂಬಂಧಗಳು ಸರಿ ಇಲ್ಲದ ಕಾರಣ ನೀಡಿ ಯಾವ ಅಧಿಕಾರಿಯೂ ಸಹಿ ಮಾಡುತ್ತಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ತನ್ನ ಸಂಗಾತಿಯ ಭೇಟಿಗಾಗಿ ಹೆಣಗಾಡುತ್ತಿರುವ ಡೆನಿಯಲ್ ಕೊನೆಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನೆರವು ಕೋರಿ ಮನವಿ ಮಾಡಿದ್ದಾರೆ.
Advertisement