ಚಿಕ್ಕೋಡಿ: ಫಿಲ್ಮಿ ಮಾದರಿಯಲ್ಲಿ ರಬ್ಬರ್ ಮೂಲಕ ತಹಶೀಲ್ದಾರ್ ಹೆಬ್ಬರಳಿನ ಗುರುತುಗಳನ್ನು ಖದೀಮನೊಬ್ಬ ನಕಲಿ ಮಾಡಿದ್ದಾನೆ. ಪೆನ್ ನಿಂದ ಮಾಡುವ ಸಹಿ ಅಲ್ಲ, ಡಿಜಿಟಲ್ ಸಹಿಯನ್ನೇ ನಕಲು ಮಾಡಿರೋದು ಇದೀಗ ಹಲವು ಅನುಮಾಗಳಿಗೆ ಎಡೆ ಮಾಡಿ ಕೊಟ್ಟಿದೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ಕಂದಾಯ ಇಲಾಖೆಯ ನೌಕರ ನಿಶಾನ್ ಹೈಬತ್ತಿ. ಈತ ತಹಶೀಲ್ದಾರ ಹೆಬ್ಬಟ್ಟನ್ನೇ ನಕಲು ಮಾಡಿ ಅಕ್ರಮ ದಾಖಲೆಗಳನ್ನು ಸೃಷ್ಟಿಸಿ ಹಣ ವಸೂಲಿ ಮಾಡಿದ್ದಾನೆ. ಜಾತಿ, ಆದಾಯ, ಜಮೀನು ವಿವಾದ ಸೇರಿದಂತೆ 31ಕ್ಕೂ ಹೆಚ್ಚು ದಾಖಲಾತಿಗಳಿಗೆ ತಹಶೀಲ್ದಾರ್ ಫಿಂಗರ್ ಪ್ರಿಂಟ್ ಅವಶ್ಯವಾಗಿದೆ. ಇದನ್ನೇ ಅಸ್ತ್ರ ಮಾಡಿಕೊಂಡ ಈತ ನಕಲಿ ಥಂಬ್ ಮಾಡಿ ಮಾದ್ಯಮಗಳ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ.
Advertisement
Advertisement
ಚಿಕ್ಕೋಡಿ ತಹಶೀಲ್ದಾರ್ ಚಿದಂಬರ್ ಕುಲಕರ್ಣಿಯವರಿಗೆ ವಿಷಯ ಗೊತ್ತಿದ್ದರು ಮೌನವಾಗಿದ್ದಾರೆ ಅಂತಾ ಹೇಳಲಾಗಿದೆ. ಆದ್ದರಿಂದ ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಚಿಕ್ಕೋಡಿ ಉಪ ವಿಭಾಗಧಿಕಾರಿ ಭೇಟಿ ನೀಡಿ ತನಿಖೆ ನಡೆಸುವ ಭರವಸೆ ನೀಡಿದ್ದಾರೆ.
Advertisement
ತಹಶೀಲ್ದಾರ್ ನಕಲಿ ಡಿಜಿಟಲ್ ಸಹಿಯಿಂದ ಸಾಕಷ್ಟು ಸಂಖ್ಯೆಯಲ್ಲಿ ನಕಲಿ ದಾಖಲೆಗಳು ನಿರ್ಮಾಣವಾಗಿರುವ ಸಾಧ್ಯತೆಗಳಿವೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Advertisement