Connect with us

ಅಡ್ಡಾದಿಡ್ಡಿ ಕಾರು ಚಾಲಾಯಿಸಿ ಬೇಕರಿಗೆ ನುಗ್ಗಿಸಿದ ಚಾಲಕ- ನಾಲ್ವರಿಗೆ ಗಾಯ

ಅಡ್ಡಾದಿಡ್ಡಿ ಕಾರು ಚಾಲಾಯಿಸಿ ಬೇಕರಿಗೆ ನುಗ್ಗಿಸಿದ ಚಾಲಕ- ನಾಲ್ವರಿಗೆ ಗಾಯ

– ಕಾರು ಚಾಲಕ ಎಂದು ಬೇರೊಬ್ಬರಿಗೆ ಥಳಿಸಿದ ಸಾರ್ವಜನಿಕರು

ಮಂಡ್ಯ: ಚಾಲಕ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿ ಬೇಕರಿಯೊಳಗೆ ನುಗ್ಗಿಸಿದ ಪರಿಣಾಮ ಬೇಕರಿಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ, ನಾಲ್ವರು ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆ, ಕೆಆರ್ ಪೇಟೆ ಪಟ್ಟಣದಲ್ಲಿ ನಡೆದಿದೆ.

ಜಿಲ್ಲೆಯ ಕೆಆರ್ ಪೇಟೆ ಪಟ್ಟಣ ಅಮೂಲ್ಯ ಬೇಕರಿಗೆ ಇದ್ದಕ್ಕಿದ್ದಂತೆ ವೇಗವಾಗಿ ಬಂದ ಕಾರು ನುಗ್ಗಿದೆ. ಪರಿಣಾಮ ಬೇಕರಿ ಮುಂದೆ ಕುಳಿತಿದ್ದ ಶರೀಫ್ ಮತ್ತು ಗೋವಿಂದ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರಿನ ಮುಂಬದಿ ಕುಳಿತಿದ್ದ ರೋಷನ್ ಪಟೇಲ್ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನ ಮೈಸೂರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತುಳಸೀರಾಮ್ ಕಾರು ಚಾಲನೆ ಮಾಡಿದ ವ್ಯಕ್ತಿಯಾಗಿದ್ದು, ವೇಗವಾಗಿ ಅಡ್ಡಾದಿಡ್ಡಿ ಕಾರು ಓಡಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಕಾರು ಬೇಕರಿಯೊಳಗೆ ನುಗ್ಗಿದ ಪರಿಣಾಮ ಬೇಕರಿಯಲ್ಲಿದ್ದ ತಿಂಡಿ ತಿನಿಸುಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ. ಇದೇ ವೇಳೆ ಕಾರು ಚಾಲಕ ಎಂದು ಸಾರ್ವಜನಿಕರು ಬೇರೊಬ್ಬರಿಗೆ ಥಳಿಸಿದ ಘಟನೆಯೂ ನಡೆದಿದೆ. ಘಟನೆ ಸಂಬಂಧ ಕೆಆರ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement