ಹಾವೇರಿ: ಜಿಲ್ಲೆಯ ರಾಣೆಬೆಣ್ಣೂರು ಬಸ್ ಡಿಪೋದಲ್ಲಿ ಜನವರಿ 1ರಂದು ಬಸ್ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ ಎಂದು ತಿಳಿದಿದ್ದ ವ್ಯಕ್ತಿ ಇಂದು ಪ್ರತ್ಯಕ್ಷವಾಗುವ ಮೂಲಕ ಅಚ್ಚರಿಯನ್ನುಂಟು ಮಾಡಿದ್ದಾನೆ.
Advertisement
ಜನವರಿ 1ರಂದು ರಾಣೆಬೆಣ್ಣೂರು ಬಸ್ ಡಿಪೋದಲ್ಲಿ ಸೆಕ್ಯೂರಿಟಿ ಗಾರ್ಡ್ ನಿಂಗರಾಜ್ ಬೆಳಗುಟ್ಟಿ ಎಂಬವರನ್ನು ದುಷ್ಕರ್ಮಿಗಳು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತಂತೆ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿತ್ತು.
Advertisement
Advertisement
ಒಂದಿಷ್ಟು ಅನುಮಾನ: ಜನವರಿ 8ರಂದು ಡಿಪೋದಲ್ಲಿ ಪತ್ತೆಯಾಗಿದ್ದ ಶವ ಯಾರದು? ಹಾಗು ನಿಂಗರಾಜ್ ಇಷ್ಟು ದಿನ ನಾಪತ್ತೆಯಾಗಿದ್ದು ಯಾಕೆ ಎಂಬ ಹಲವು ಪ್ರಶ್ನೆಗಳು ಜನರಲ್ಲಿ ಕಾಡುತ್ತಿವೆ. ಅಂದು ಕೊಲೆ ನಡೆದ ಸ್ಥಳದಲ್ಲಿ ಡ್ಯೂಟಿಯಲ್ಲಿದ್ದ ಇದ್ದಕ್ಕಿದಂತೆ ನಾಪತ್ತೆಯಾಗಿದ್ದು, ಕೊಲೆಗೂ ಮತ್ತು ನಿಂಗರಾಜ್‍ನಿಗಿರುವ ಸಂಬಂಧದ ಬಗ್ಗೆ ಹಲವು ಪ್ರಶ್ನೆಗಳು ಸ್ಥಳೀಯರಲ್ಲಿ ಹುಟ್ಟಿಕೊಂಡಿವೆ. ಈ ಎಲ್ಲಾ ಪ್ರಶ್ನೆಗಳಿಗೆ ಪೊಲೀಸ್ ತನಿಖೆಯಿಂದ ಉತ್ತರ ಸಿಗಬೇಕಿದೆ.
Advertisement
ನಿಂಗರಾಜ್ 8 ತಿಂಗಳ ಬಳಿಕ ಹುಬ್ಬಳ್ಳಿಯಲ್ಲಿ ಪ್ರತ್ಯಕ್ಷನಾಗುವ ಮೂಲಕ ಅಚ್ಚರಿಯನ್ನುಂಟು ಮಾಡಿದ್ದಾರೆ. ಈ ಸಂಬಂಧ ರಾಣೆಬೆನ್ನೂರು ಪೊಲೀಸರು ನಿಂಗರಾಜ್ ಹಾಗೂ ಪತ್ನಿ ನೇತ್ರಾವತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.