ಬೆಂಗಳೂರು: ಸಾರ್ವಜನಿಕರೇ ಎಚ್ಚರ ನಿಮ್ಮ ಮೊಬೈಲ್‍ಗೆ ಬರುತ್ತೆ ಲಕ್ಷಲಕ್ಷದ ಬಂಪರ್ ಪ್ರೈಜ್ ಬಂದಿರುವ ಪೋನ್ ಕಾಲ್. ಎಚ್ಚರ ತಪ್ಪದರೆ ನಿಮ್ಮ ಜೇಬಿಗೆ ಬೀಳುತ್ತೆ ಕತ್ತರಿ, ಹೀಗೆ ಮೋಸ ಮಾಡುವ ಖತರ್ನಾಕ್ ಜಾಲವೊಂದು ತಲೆಯತ್ತಿದೆ. ಹೀಗೆ ಪ್ರತಿಷ್ಠಿತ ಹಿಂದಿ ರಿಯಾಲಿಟಿ ಶೋನ ಹೆಸರಿನಲ್ಲಿ ಆನ್‍ಲೈನ್ ಮುಖಾಂತರ ಮೋಸ ಮಾಡಲು ಯತ್ನಿಸಿರುವ ಘಟನೆ ನಡೆದಿದೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್‍ಪೇಟೆ ನಿವಾಸಿ ರವಿ ಎಂಬವರಿಗೆ ಕಳೆದ ಎರಡು ದಿನಗಳ ಹಿಂದೆ ಯುವಕನೊಬ್ಬ ಕರೆ ಮಾಡಿದ್ದಾನೆ. ಕೌನ್ ಬನೇಗಾ ಕರೋಡ್ ಪತಿ ಹೆಸರಿನಲ್ಲಿ ಕರೆ ಮಾಡಿದ್ದು, ಈ ರಿಯಾಲಿಟಿ ಶೋನಲ್ಲಿ ನಿಮ್ಮ ನಂಬರ್ ಆಯ್ಕೆಯಾಗಿದೆ. ನೀವು 25 ಲಕ್ಷ ಹಣ ಗೆದ್ದಿರುವಿರಿ ನಿಮ್ಮ ಖಾತೆಗೆ ಹಣ ಜಮಾವಣೆಯಾಗಲಿದೆ ಎಂದು ತಿಳಿಸಿ ಖತರ್ನಾಕ್ ಟೀಂನಿಂದ ದೂರವಾಣಿ ಕರೆ ಬಂದಿದೆ.
Advertisement
Advertisement
ಮರುದಿನ ಮುಂಜಾನೆ ಮತ್ತೊಮ್ಮೆ ಕರೆ ಮಾಡಿ ನಿಮ್ಮ ವಾಟ್ಸಾಪ್ ನಂಬರ್ ಕೋಡಿ, ನೀವು ಆಯ್ಕೆಯಾಗಿರುವ ವಿಡಿಯೋ ಕಳಿಸುತ್ತೇನೆ ಎಂದು ವಿಡಿಯೋವೊಂದನ್ನು ಕಳಿಸಿದ್ದಾನೆ. ಸರ್ಕಾರದ ನಿಯಾಮಾವಳಿ ಪ್ರಕಾರ 25 ಸಾವಿರ ಹಣವನ್ನ ತೆರಿಗೆ ರೂಪದಲ್ಲಿ ನೀವು ಮುಂಗಡವಾಗಿ ಪಾವತಿಸಬೇಕಾಗುತ್ತದೆ ಎಂದಿದ್ದಾನೆ.
Advertisement
Advertisement
ನಂತರ ಇವರು ತಿರಸ್ಕರಿಸಿದಾಗ 10 ಸಾವಿರ ಜಮಾ ಮಾಡುವಂತೆ ಕೇಳಿದ್ದಾನೆ. ಇವರು ಬ್ಯಾಂಕ್ ಮ್ಯಾನೇಜರ್ ಹತ್ತಿರ ಮಾತನಾಡುತ್ತೇನೆ ಎಂದಾಗ ಮತ್ತೊಮ್ಮೆ, ನೀವು ಯಾರಿಗೂ ತಿಳಿಸಬೇಡಿ, ತಿಳಿಸಿದರೆ ನಿಮ್ಮ ಹಣಕ್ಕೆ ತೊಂದರೆಯಾಗಲಿದೆ ಎಂದು ಹಣ ಜಮಾವಣೆಗೊಳಿಸಿ ಮೋಸ ಮಾಡಲು ಯತ್ನಿಸಿದ್ದಾನೆ.